ಕಾಣೆಯಾಗಿರುವ ಮೀನುಗಾರಿಕಾ ಬೋಟ್ ಶೀಘ್ರ ಪತ್ತೆ: ಗೃಹ ಸಚಿವ ಎಂ.ಬಿ.ಪಾಟೀಲ್

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಯಲ್ಲಾಪುರ:
ಕಳೆದ ತಿಂಗಳು ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಕೆಗೆ ತೆರಳಿ ಆ ಬಳಿಕ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾದವರ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಶೀಘ್ರ ಅವರು ಪತ್ತೆಯಾಗುವ ವಿಶ್ವಾಸವಿದೆ ಎಂದು ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಹುಬ್ಬಳ್ಳಿಯಿಂದ ಉಡುಪಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಯಲ್ಲಾಪುರ ಪ್ರವಾಸಿ ಮಂದಿರದಲ್ಲಿ ಉಪಹಾರ ಸೇವಿಸಲು ಕೆಲಕಾಲ ತಂಗಿದ್ದ ವೇಳೆ ಅವರನ್ನು ಭೆಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸುವರ್ಣ ತ್ರಿಭುಜ ಹಡಗಿನಲ್ಲಿದ್ದ ಮೀನುಗಾರರ ಪತ್ತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಅವರ ಪತ್ತೆಗೆ ಒಂದು ಹಡಗನ್ನು ಡಿ.24 ರಿಂದ ನಿಯೋಜಿಸಲಾಗಿದೆ. ಜಲ ಮಾರ್ಗ ಹಾಗೂ ವಾಯು ಮಾರ್ಗ ಎರಡೂ ಕಡೆಗಳಿಂದ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮಲ್ಪೆಗೆ ತೆರಳಿ ಅವರ ಕುಟುಂಬ ವರ್ಗ ಹಾಗೂ ಮೀನುಗಾರ ಸಲಹೆ ಪಡೆದು ಮುಂದಿನ ಕಾರ್ಯತಂತ್ರ ರೂಪಿಸಲಾಗಿವುದು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಪತ್ತೆಯಾದ ಮೀನುಗಾರರು ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥನೆ ಮಾಡುತ್ತೇವೆ ಎಂದು ಕೋರಿದರು.

ಉತ್ತರ ಕನ್ನಡ ಜಿಲ್ಲೆಯ 4 ಹಾಗೂ ಉಡುಪಿ ಜಿಲ್ಲೆಯ ಮೂವರು ಮೀನುಗಾರರು ಈ ಬೋಟಿನಲ್ಲಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ