ಚುನಾವಣೆಗೆ ತಯಾರಿ: ಆಂಧ್ರಪ್ರದೇಶದಲ್ಲಿ ಬ್ರಾಹ್ಮಣ ಯುವಕರಿಗೆ ಸಬ್ಸಿಡಿ ಕಾರು ಯೋಜನೆ

ಕರಾವಳಿ ಕರ್ನಾಟಕ ವರದಿ

ಅಮರಾವತಿ:
ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇರುವಂತೆಯೇ ಆಂಧ್ರಪ್ರದೇಶದಲ್ಲಿ ಅಧಿಕಾರಸ್ಥ ತೆಲುಗು ದೇಶಂ ಪಾರ್ಟಿ ಬ್ರಾಹ್ಮಣ ಸಮುದಾಯದ ನಿರುದ್ಯೋಗಿ ಯುವಜನರಿಗಾಗಿ ಆಸಕ್ತಿಕರ ಯೋಜನೆಯೊಂದನ್ನು ಘೋಷಣೆ ಮಾಡಿದೆ.

ಶುಕ್ರವಾರದಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಯೋಜನೆಯಡಿಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರುಗಳನ್ನು ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ವಿತರಿಸಿದ್ದಾರೆ. ಇದು ಸ್ವಯಂ ಉದ್ಯೋಗ ಯೋಜನೆ ಅಡಿ ಮಾಡಿರುವ ವಿತರಣೆ. ಈ ಕಾರು ಪಡೆದ ನಿರುದ್ಯೋಗಿಗಳಿಗೆ ಸಬ್ಸಿಡಿ ಎರಡು ಲಕ್ಷ ರುಪಾಯಿ ದೊರೆಯುತ್ತದೆ. 

ಕಾರಿನ ಬೆಲೆಯ ಹತ್ತು ಪರ್ಸೆಂಟ್ ಮೊತ್ತವನ್ನು ಫಲಾನುಭವಿಗಳು ಪಾವತಿಸಬೇಕು. ಬಾಕಿ ಮೊತ್ತವನ್ನು ಆಂಧ್ರಪ್ರದೇಶ ಬ್ರಾಹ್ಮಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಾಲ ನೀಡುತ್ತದೆ. 

ಈ ಕಾರುಗಳ ಮೂಲಕ ಸ್ವತಃ ಚಾಲಕರಾಗಿ ವೃತ್ತಿ ಆರಂಭಿಸಬಹುದು. ಅಥವಾ ಓಲಾ, ಉಬರ್ ನಂಥ ಕಡೆ ಸೇರಿ ಕಾರ್ಯ ನಿರ್ವಹಿಸಬಹುದು. 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ