ಪುನೀತ್ ವಿರುದ್ಧ ತೆರಿಗೆ ವಂಚನೆ ಆರೋಪ? ಮುಂದುವರಿದ ಐಟಿ ದಾಳಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಕನ್ನಡ ಚಿತ್ರರಂಗದ ದಿಗ್ಗಜ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು ಇಂದು ಕೂಡ ದಾಳಿ ಮುಂದಿವರಿದಿದೆ.ಈ ನಡುವೆ ನಟ ಪುನೀತ್ ರಾಜಕುಮಾರ್ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಕೆಲವು ದಾಖಲಾತಿ ಪರಿಶೀಲನೆ ಬಾಕಿ ಇರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ಬಂದು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ

ಹಲವಾರು ಬಿಗ್ ಬಜೆಟ್ ಚಲನಚಿತ್ರಗಳಿಂದ ಪುನೀತ್ ರಾಜ್‍ಕುಮಾರ್ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದರು. ಆದರೆ ಆದಾಯ ತೆರಿಗೆ ಕಟ್ಟದೇ ವಂಚಿಸಿದರು ಎಂಬ ಆರೋಪ ಕೇಳಿಬಂದಿತ್ತು. 

ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಪುನೀತ್ ಮನೆಗೆ ಬಂದಿದ್ದಾರೆ. ತಡರಾತ್ರಿ ಪರಿಶೀಲನೆ ಮುಗಿತು ಎಂದು ಐಟಿ ಅಧಿಕಾರಿಗಳು ತೆರಳಿದ್ದರು. ಬಳಿಕ ಮಧ್ಯರಾತ್ರಿ ಪುನೀತ್ ಮನೆಗೆ ಮತ್ತೆ ಬಂದಿದ್ದಾರೆ.
ಅಧಿಕಾರಿಗಳು ಪುನೀತ್ ಮನೆಯಲ್ಲೆ ಬೀಡು ಬಿಟ್ಟಿದ್ದಾರೆ. ಅಧಿಕಾರಿಗಳು ಪುನೀತ್ ಮನೆ ಒಳಗೆ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಮೂವರು ಐಟಿ ಅಧಿಕಾರಿಗಳು ಪುನೀತ್ ಮನೆ ಒಳಗಡೆ ಪರಿಶೀಲನೆ ನಡೆಸುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ