ನೌಕಾಸೇನೆ ಸಿಬ್ಬಂದಿಯ ದುರ್ವರ್ತನೆಗೆ ವೃದ್ಧ ಬಲಿ

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ
: ತಾಲೂಕಿನ ಅರಗಾದಲ್ಲಿರುವ ಸೀಬರ್ಡ್ ನೌಕಾನೆಲೆಯ ಸಿಬ್ಬಂದಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ವದೃದ್ಧನೋರ್ವನ ಮೇಲೆ ಹಲ್ಲೆ ನಡೆಸಿದ ಪರಿಣಾಮ ತೀವೃ ಗಾಯಗೊಂಡ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಅರಗಾದ ಕನ್ಸ್‌ಟ್ರಕ್ಷನ್ ಕಂಪನಿಯೊಂದರಲ್ಲಿ ವಾಚ್‌ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿಣಗಾ ಮಾಳಸವಾಡದ ನಿವಾಸಿ ಗೋವಿಂದ ಮಾಳ್ಸೇಕರ್ (70) ಮೃತ ವೃದ್ಧ. ಎಂದಿನಂತೆ ಗೋವಿಂದ ಕರ್ತವ್ಯದಲ್ಲಿದ್ದ ವೇಳೆ ದನವೊಂದು ಕಂಪನಿಯ ಆವರಣದ ಒಳನುಗ್ಗಲು ಪ್ರಯತ್ನಿಸಿದಾಗ ಅದನ್ನು ಹೊರಕ್ಕೆ ಓಡಿಸಿದ್ದಾರೆ. ಆ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ನೌಕಾಸೇನೆಯ ಸಿಬ್ಬಂದಿಯೊಬ್ಬನ ಬೈಕ್‌ಗೆ ದನ ಅಡ್ಡ ಬಂದಿದ್ದರಿಂದ ಆತನು ಬೈಕ್ ಸಮೇತ ಉರುಳಿ ಬಿದ್ದಿದ್ದಾನೆ.

ಇದರಿಂದ ಕೋಪಗೊಂಡ ಆತನು ಏಕಾಏಕಿ ಕಂಪನಿಯ ಆವರಣದ ಒಳ ನುಗ್ಗಿ ಗೋವಿಂದ ಅವರ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವೃ ಏಟು ಬಿದ್ದ ಪರಿಣಾಮ ಗೋವಿಂದ ಅವರ ಸ್ಥಿತಿ ಗಂಭೀರವಾಗಿ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಗೋವಿಂದ ಮೃತಪಟ್ಟಿದ್ದಾರೆ.

ಈ ಕುರಿತು ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯ ಶೋಧಕ್ಕಾಗಿ ಬಲೆ ಬೀಸಿದ್ದಾರೆ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ