ಬೈಕ್-ಲಾರಿ ಅಪಘಾತದಲ್ಲಿ ಇಬ್ಬರು ಯಕ್ಷಗಾನ ಕಲಾವಿದರು ಮೃತ್ಯು

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಹೊನ್ನಾವರ:
ತಾಲೂಕಿನ ಗುಣವಂತೆ ಬಳಿ ಬೈಕ್ ಹಾಗೂ ಲಾರಿಯ ನಡುವೆ ನಡೆದ ಭೀಕರ ಅಪಘಾತದಲ್ಲಿ ಯಕ್ಷಗಾನ ಯುವ ಕಲಾವಿದರಿಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಬುಧವಾರ ರಾತ್ರಿ ನಡೆದಿದೆ.

ಸೌಕೂರು ಮೇಳದ ಸ್ತ್ರೀ ಪಾತ್ರಧಾರಿ, ಕುಂದಾಪುರದ ದಿನೇಶ್ ಹೆನ್ನಾಬೈಲ್ (25) ಹಾಗೂ ಪುಂಡು ವೇಷಧಾರಿ, ಮಾವಿನಕುರ್ವ ನಿವಾಸಿ ಪ್ರಸನ್ನ ಆಚಾರ್ಯ (25) ಮೃತಪಟ್ಟವರು.

ಹಕ್ಕಲಕೇರಿಯಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನದಲ್ಲಿ ಪಾತ್ರ ಮಾಡಲು ಅವರು ಮಾವಿನಕುರ್ವಾದಿಂದ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ‌.

ಪ್ರತ್ಯಕ್ಷದರ್ಶಿಗಳ ಪ್ರಕಾರ ಇಡಗುಂಜಿ ಸಮೀಪದ ಬಸ್ತಿ ಬಳಿ ಇನ್ನೊಂದು ಬೈಕ್ ಇವರ ಬೈಕ್ ಗೆ  ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಉರುಳಿ ಬಿದ್ದ ಇವರ ಮೇಲೆ ವೇಗದಿಂದ ಲಾರಿಯೊಂದು ಹಾದು ಹೋದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ಇನ್ನೊಂದು ಬೈಕ್ ಸವಾರರು ಚಿಕ್ಕಪುಟ್ಟ ಗಾಯಗಳಾಗಿದ್ದ ಕಾರಣ ತಕ್ಷಣ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.

ದಿನೇಶ್ ಹೆನ್ನಾಬೈಲ್, ಕಳೆದ 13 ವರ್ಷಗಳಿಂದ ಸೌಕೂರು ಮೇಳದ ತಿರುಗಾಟದಲ್ಲಿದ್ದರೆ. ಪ್ರಸನ್ನ ಅವರದ್ದು ಇದು 6ನೇ ತಿರುಗಾಟ.‌ ಇಬ್ಬರೂ ಉತ್ತಮ ಕಲಾವಿದರಾಗಿದ್ದು, ತಮ್ಮ ಪಾತ್ರಗಳಿಂದ ಪ್ರೇಕ್ಷಕರ ಮನಸ್ಸನ್ನು ಸೂರೆಗೊಳಿಸುತ್ತಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ