ಋತುಚಕ್ರದ ವಯಸ್ಸಿನ ಮಹಿಳೆಯರ ಪ್ರವೇಶ: ಶುದ್ಧೀಕರಣಕ್ಕಾಗಿ ಮುಚ್ಚಿದ ಶಬರಿಮಲೆ ದೇಗುಲ

ಕರಾವಳಿ ಕರ್ನಾಟಕ ವರದಿ

ತಿರುವನಂತಪುರಂ
: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮೊತ್ತ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಇಬ್ಬರು ಋತುಚಕ್ರದ ವಯಸ್ಸಿನ ಸ್ತ್ರೀಯರು ಪ್ರವೇಶಿಸಿದ ಬಳಿಕ ಇದೀಗ ಅಯ್ಯಪ್ಪ ದೇಗುಲವನ್ನು ಮುಚ್ಚಲಾಗಿದೆ.

40ರ ಆಸುಪಾಸು ವಯಸ್ಸಿನ ಇಬ್ಬರು ಸ್ತ್ರೀಯರು ಕಳೆದ ರಾತ್ರಿ ಶಬರಿಮಲೆ ದೇಗುಲಕ್ಕೆ ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ ಪ್ರವೇಶಿಸಿದ್ದು ಈ ಹಿನ್ನೆಲೆಯಲ್ಲಿ ಇದೀಗ ದೇವಳದ ಆಡಳಿತ ಮಂಡಳಿ ದೇವಳದ "ಶುದ್ಧೀಕರಣ" ಮಾಡಲು ಮುಂದಾಗಿದೆ. ಹೀಗಾಗಿ ದೇವಾಲಯವನ್ನು ತಾತ್ಕಾಲಿಕ ಮುಚ್ಚಲಾಗಿದೆ. ದೇವಳದಲ್ಲಿ ಅರ್ಚ್ಕರು ಶುದ್ಧೀಕರಣ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ಈ ಇಬ್ಬರು ಮಹಿಳೆಯ ಪ್ರವೇಶವನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಚಿತಪಡಿಸಿದ್ದಾರೆ. ಬಿಜೆಪಿ ಸ್ತ್ರೀಯರ ಪ್ರವೇಶವನ್ನು ಖಂಡಿಸಿದೆ.

ಹಿಂದಿನ ವರದಿ
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 40ರ ವಯಸ್ಸಿನ ಇಬ್ಬರು ಮಹಿಳೆಯರು ಪ್ರವೇಶಿಸಿ ದೇವರ ದರ್ಶನ ಪಡೆಯುವ ಮೂಲಕ ಇತಿಹಾಸ ನಿರ್ಮಾಣವಾಗಿದೆ.

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಸ್ತ್ರೀಯರಿಗೆ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಮೊತ್ತ ಮೊದಲ ಬಾರಿಗೆ 40ರ ಪ್ರಾಯದ ಮಹಿಳೆಯರು ದೇಗುಲಕ್ಕೆ ಪ್ರವೇಶಿಸಿದ್ದಾರೆ. ಈ ಇಬ್ಬರೂ ಮಹಿಳೆಯರು ದೇಗುಲ ಪ್ರವೇಶಿಸಿದ ವಿಡಿಯೊ ಬಿಡುಗಡೆಯಾಗಿದ್ದು ಅದನ್ನು ಕೇರಳ ಪೊಲೀಸರು ಖಚಿತಪಡಿಸಿದ್ದಾರೆ.

ಶಬರಿಮಲೆಯಲ್ಲಿ ಈ ಹಿಂದೆ 10 ಮತ್ತು 50 ವರ್ಷದ ನಡುವಿನ ಸ್ತ್ರೀಕರಿಗೆ ಪ್ರವೇಶ ನಿಷೇಧವಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.  ತೀರ್ಪಿನ ಬಳಿಕ ದೇಗುಲಕ್ಕೆ ಪ್ರವೇಶ ಪಡೆಯಲು ಹಲವಾರು ಮಹಿಳೆಯರು ಪ್ರಯತ್ನಿಸಿದ್ದರೂ ಸಹ ಪ್ರತಿಭಟನಾಕಾರರು ಆ ವಯೋಮಾನದ ಮಹಿಳೆಯರು ಪ್ರವೇಶಿಸದಂತೆ ತಡೆಯೊಡ್ಡಿದ್ದರು. ಆದರೆ ಇದೀಗ ಇಬ್ಬರು ನಲ್ವತ್ತರ ಪ್ರಾಯದ ಸ್ತ್ರೀಯರು ಅಯ್ಯಪ್ಪ ದೇಗುಲ ಪ್ರವೇಶಿಸಿ ದಾಖಲೆ ನಿರ್ಮಿಸಿದ್ದಾರೆ.

ಶಬರಿಮಲೆ ಸಂಪ್ರದಾಯವೇ ವಿನಃ ಮಹಿಳೆಯ ಹಕ್ಕಿನ ವಿಷಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ ಮರುದಿನವೇ ಅಯ್ಯಪ್ಪ ದೇಗುಲದಲ್ಲಿ 40ರ ವಯಸ್ಸಿನ ಮಹಿಳೆಯರು ಪ್ರವೇಶಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ