ಶಬರಿಮಲೆ ಸಂಪ್ರದಾಯವೇ ವಿನಃ ಮಹಿಳೆಯರ ಹಕ್ಕಿನ ವಿಷಯವಲ್ಲ: ಪ್ರಧಾನಿ ಮೋದಿ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಶಬರಿಮಲೆ ಮತ್ತು ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ತ್ರಿವಳಿ ತಲಾಖ್ ಎರಡೂ ವಿಭಿನ್ನ ಸಮಸ್ಯೆಗಳು. ಎರಡನ್ನೂ ತುಲನೆ ಮಾಡಿ ನೋಡಲೇಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಶಬರಿಮಲೆ ಮತ್ತು ತ್ರಿವಳಿ ತಲಾಖ್ ಎರಡೂ ಒಂದು ರೀತಿಯ ಸಮಸ್ಯೆ ಅಲ್ಲ. ಎರಡೂ ಸಂಪೂರ್ಣ ವಿರುದ್ಧವಾದ ಸಮಸ್ಯೆ ಆಗಿವೆ. ಪಾಕಿಸ್ತಾನ ಸೇರಿದಂತೆ ತ್ರಿವಳಿ ತಲಾಖ್‌ಗೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿಯೇ ನಿಷೇಧ ಇದೆ. ತ್ರಿವಳಿ ತಲಾಖ್ ಸಂಪ್ರದಾಯದ ವಿಷಯವೇ ಆಗಿದ್ದರೆ ಮುಸ್ಲಿಂ ರಾಷ್ಟ್ರಗಳಲ್ಲಿ ಅದಕ್ಕೆ ನಿಷೇಧ ಇರುತ್ತಿರಲಿಲ್ಲ. ಇದು ಲಿಂಗ ಸಮಾನತೆ, ಸಾಮಾಜಿಕ ನ್ಯಾಯದ ವಿಷಯ ಆಗಿದೆ ಎಂದು ಮೋದಿ ಹೇಳಿದರು.

ಶಬರಿಮಲೆ ಸಂಪ್ರದಾಯ ಪಾಲನೆ ಆಗಬೇಕು. ದೇಶದ ಕೆಲವು ದೇವಸ್ಥಾನಗಳಿಗೆ ಗಂಡಸರು ಸಹ ಹೋಗುವಂತಿಲ್ಲ, ಹಾಗೆಯೇ ಕೆಲವು ದೇವಾಲಯಗಳಿಗೆ ಹೆಂಗಸರು ಹೋಗುವಂತಿಲ್ಲ. ಅದು ಆಯಾ ದೇವಾಲಯಗಳು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ ಎಂದು ಮೋದಿ ಹೇಳಿದರು.

ಬಿಜೆಪಿಯು ನ್ಯಾಯಾಲಯದ ತೀರ್ಪು ಬಂದ ನಂತರವಷ್ಟೆ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗುತ್ತದೆ ಎಂದು ಮೋದಿ ಹೇಳಿದರು. ರಾಮ ಮಂದಿರ ಆಗಬಾರದೆಂದು ಹಲವು ವರ್ಷಗಳಿಂದ ಸರ್ಕಾರಗಳು ಯತ್ನಿಸಿವೆ. ಈಗಲೂ ವಿಷಯ ಸುಪ್ರಿಂಕೋರ್ಟ್‌ನಲ್ಲಿದೆ. ನಾನು ಕಾಂಗ್ರೆಸ್‌ನ ಗೆಳೆಯರಲ್ಲಿ ಕೇಳಿಕೊಳ್ಳುವುದೆಂದರೆ ತಮ್ಮ ಲಾಯರ್‌ಗಳಿಗೆ ಹೇಳಿ ಪ್ರಕರಣ ಇನ್ನಷ್ಟು ತಡ ಆಗುತ್ತಿರುವುದನ್ನು ತಡೆಯಿರಿ ಎಂದು ಮೋದಿ ಹೇಳಿದರು.

2019 ರ ಲೋಕಸಭೆ ಚುನಾವಣೆಯ ಬಗ್ಗೆ ಮಾತನಾಡಿದ ಮೋದಿ, ಮುಂದಿನ ಚುನಾವಣೆಯಲ್ಲಿ ನಾವು ಖಂಡಿತ ಬಹುಮತದಿಂದ ಗೆದ್ದುಬರುತ್ತೇವೆ. ನಾವು ಮೈತ್ರಿ ಧರ್ಮ ಪಾಲಿಸಿದ್ದೇವೆ. ನಾವು ಮಾಡಿಕೊಂಡಿರುವ ಮೈತ್ರಿ ದೇಶದ ಅಭಿವೃದ್ಧಿಗೆ ಎಂದು ಅವರು ಹೇಳಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ