'ಬಾಳುವಂತ ಹೂವೆ ,ಬಾಡುವಾಸೆ ಏಕೆ' ಕೃತಿ ಬಿಡುಗಡೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಉಡುಪಿಯ ಖ್ಯಾತ ಮನೋ ವೈದ್ಯ ಡಾ. ಪಿ. ವಿ. ಭಂಡಾರಿ ಮತ್ತು ಲೇಖಕ ನಾಗರಾಜ ಮುರ್ತಿ ಜಂಟಿಯಾಗಿ ಬರೆದಿರುವ "ಬಾಳುವಂತ ಹೂವೆ ,ಬಾಡುವಾಸೆ ಏಕೆ?" ಕೃತಿಯನ್ನು ಉಡುಪಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಉಡುಪಿಯ ಬಾಳಿಗಾ ಆಸ್ಪತ್ರೆಯ 26ನೇ ಮದ್ಯವ್ಯಸನ ವಿಮುಕ್ತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಈ ಪುಸ್ತಕ ಬಿಡುಗಡೆಗೊಂಡಿತು..

ಶಿಬಿರವನ್ನು ವೈದ್ಯರೂ ಹಾಗೂ ಹಿರಿಯ ಸಾಹಿತಿಗಳು ಆಗಿರುವ ನಾ ಮೊಗಸಾಲೆ ಅವರು ಉದ್ಘಾಟಿಸಿದರು. ಪುಸ್ತಕವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವೇಕ ವಿನ್ಸೆಂಟ್ ಪಾಯಸ್ ಅವರು ಬಿಡುಗಡೆಗೊಳಿಸಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ಗುರುಮೂರ್ತಿ ಭಟ್, ಬಡಗಬೆಟ್ಟು ಕ್ರೆಡಿಟ್‌ ಕೋಪರೇಟಿವ್ ಸೊಸೈಟಿಯ ಜನರಲ್ ಮ್ಯಾನೇಜರ್ ಇಂದ್ರಾಳಿ ಜಯಕರ ಶೆಟ್ಟಿ, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್‌ನ ಶ್ರೀ ಸಿರಾಜ್ ಅಹಮದ್, ಡಾ. ಭಂಡಾರಿ ಅವರ ತಾಯಿ ಮೀನಾಕ್ಷಿ ಭಂಡಾರಿ ಉಪಸ್ಥಿತರಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ