ಕೆಜಿಎಫ್ ದಾಖಲೆ: 150 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ!

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಬಿಡುಗಡೆಯಾದ ಆರನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದ ಕೆಜಿಎಫ್ ಚಿತ್ರ ಇದೀಗ 10ನೇ ದಿನಕ್ಕೆ 150 ಕೋಟಿ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ದಾಖಲಿಸಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ 150 ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರವಾಗಿದೆ.
 
ಕನ್ನಡದಲ್ಲಿ ಒಟ್ಟಾರೆ 87 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆ. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ಒಟ್ಟಾರೆ 75 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿತ್ತು. ಇದೀಗ ಈ ದಾಖಲೆಯನ್ನು ಕೆಜಿಎಫ್ ಮುರಿದಿದೆ.

ಇಲ್ಲಿಯವರೆಗೂ ಹಿಂದಿ ಆವೃತ್ತಿಯಲ್ಲಿ ಕೆಜಿಎಫ್ ಚಿತ್ರ ಒಟ್ಟಾರೆ 26.70 ಕೋಟಿ ರುಪಾಯಿ ಗಳಿಸಿರುವ ಕೆಜಿಎಫ್ ಹೊಸ ದಾಖಲೆ ನಿರ್ಮಿಸಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ