ವಿವಾಹಿತ ಯುವತಿ ವಿಷ ಸೇವಿಸಿ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ

ಪುತ್ತೂರು
: ಹೊಸ ವರ್ಷದ ಮೊದಲ ದಿನವೇ ವಿವಾಹಿತ ಯುವತಿ ಆತ್ಮಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ. ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು ಮೃತ ಯುವತಿಯನ್ನು ದಿವ್ಯ ಪೂಜಾರಿ ಎಂದು ಗುರುತಿಸಲಾಗಿದೆ.

ಡಿಸೆಂಬರ್ 31 ರಂದು ದಿವ್ಯ ತಮ್ಮ ತವರು ಮನೆಯಿಂದ ಗಂಡನ ಮನೆಗೆ ಹೋಗಿದ್ದರು. ಜನವರಿ 1ರ ಬೆಳಿಗ್ಗೆ ದಿವ್ಯ ವಿಷ ಸೇವಿಸಿದ್ದಾರೆ. ಬಳಿಕ ತಾನು ವಿಷ ಸೇವಿಸಿರುವುದಾಗಿ ಮನೆಮಂದಿಗೆ ಹೇಳಿದ್ದಾರೆ.

ತಕ್ಷಣವೆ ದಿವ್ಯ ಪೂಜಾರಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಒಂದು ವರ್ಷ ಹಿಂದಷ್ಟೆ ತಾನು ಪ್ರೀತಿಸಿದ್ದ ಯುವಕನೊಂದಿಗೆ ದಿವ್ಯ ಮದುವೆಯಾಗಿದ್ದರು. ಪುತ್ತೂರು ಬಟ್ಟೆ ಮಳಿಗೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ