ಕರಾವಳಿ ಕರ್ನಾಟಕ ವರದಿಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ನ ಹಿರಿಯ ನಟ ಖಾದರ್ ಖಾನ್ (81) ಸೋಮವಾರ ಮೃತರಾಗಿದ್ದಾರೆ.
ಕೆನಡಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖಾದರ್ ಖಾನ್ ಅಲ್ಲಿಯೇ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಕೆನಡಾದಲ್ಲೇ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ. ಅವರ ಇಡೀ ಕುಟುಂಬವೂ ಕೆನಡಾದಲ್ಲೇ ವಾಸಿಸುತ್ತಿರುವುದರಿಂದ, ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
ಹಿಂದಿ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ, ಅತ್ಯುತ್ತಮ ಸಂಭಾಷಣಾಕಾರರಾಗಿ ಖಾದರ್ ಖಾನ್ ಹೆಸರು ಗಳಿಸಿದ್ದರು.
ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಂಭಾಷಣೆಯನ್ನು ಬರೆದಿದ್ದಾರೆ. ಲಾವಾರಿಸ್, ದಾಗ್, ಅಮರ್ ಅಕ್ಬರ್ ಅಂತೋನಿ, ಮುಕದ್ದರ್ ಕಾ ಸಿಖಂದರ್, ಸುಹಾಗ್, ಕೂಲಿ, ಶರಾಬಿ ಮುಂತಾದ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
5 ಗ್ರಾ.ಪಂ.ಗಳನ್ನು ಸೇರಿಸಿ ಗ್ರೇಟರ್ ಉಡುಪಿ!