ಜೇಟ್ಲಿ ಸವಾಲಿಗೆ ಕಾಂಗ್ರೆಸ್ ಸಿದ್ಧ, ಸಮಯ ನಿಗದಿ ಮಾಡಿ ಎಂದರು ಮಲ್ಲಿಕಾರ್ಜುನ ಖರ್ಗೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ರಾಫೆಲ್ ಯುದ್ದ ವಿಮಾನ ಖರೀದಿ ವಿವಾದ ಸಂಬಂಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಕಿರುವ ಸವಾಲನ್ನು ಕಾಂಗ್ರೆಸ್ ಸ್ವೀಕರಿಸಿದೆ. ಚರ್ಚೆಗೆ ನೀವೆ ಸಮಯ ನಿಗದಿ ಮಾಡಿ ಎಂದು ಕಾಂಗ್ರೆಸ್ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಫೆಲ್​ ಒಪ್ಪಂದದ ಕುರಿತು ಸೋಮವಾರ ಲೋಕಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದೆ. ರಾಫೇಲ್​ ಕುರಿತ ಚರ್ಚೆಗೆ ಬನ್ನಿ, ಓಡಿಹೋಗಬೇಡಿ ಎಂಬ ವಿತ್ತ ಸಚಿವ ಅರುಣ್​ ಜೇಟ್ಲಿ ಅವರ ಸವಾಲು ಸ್ವೀಕರಿಸಿದ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, 'ಚರ್ಚೆಗೆ ನಾವು ಸಿದ್ಧ. ಜನವರಿ 2ರಂದು ಸಮಯ ನಿಗದಿ ಮಾಡಿ ಎಂದು ಹೇಳಿದ್ದಾರೆ.

'ಜೇಟ್ಲಿ ಜೀ ನಮಗೆ ಸವಾಲೆಸೆದಿದ್ದಾರೆ. ನಾವು ಒಪ್ಪಿಕೊಂಡಿದ್ದೇವೆ. ಜನವರಿ 2 ರಂದು ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ದಯವಿಟ್ಟು ಸಮಯ ನಿಗದಿ ಮಾಡಿ ಎಂದು ಖರ್ಗೆ ಹೇಳಿದ್ದಾರೆ.

 ರಾಫೆಲ್ ಒಪ್ಪಂದದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಈ ಹಿಂದೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿವ ಜೇಟ್ಲಿ, ರಾಫೆಲ್ ಬಗ್ಗೆ ಚರ್ಚೆ ಆರಂಭಿಸಿ, ನಾವು ಉತ್ತರಕ್ಕೆ ಸಿದ್ಧರಿದ್ದೇವೆ. ಕಾಂಗ್ರೆಸ್ ಸುಳ್ಳು ಪ್ರಚಾರದಲ್ಲಿ ತೊಡಗಿದೆ ಎಂದು ನಿರೂಪಿಸುತ್ತೇವೆ ಎಂದಿದ್ದರು.

ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷ ಸಂಸದರು ಸ್ಪೀಕರ್ ಸುಮಿತ್ರಾ ಮಹಾಜನ್ ಎದುರು ರಾಫೆಲ್ ತನಿಖೆ ಕುರಿತು ಪ್ರತಿಭಟನೆ ನಡೆಸಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ