ಹೊಸ ವರ್ಷದ ಸಂಭ್ರಮದ ನಡುವೆ ಸಾವಿನ ಸುದ್ದಿ: ಮೂವರು ವಿದ್ಯಾರ್ಥಿಗಳು ನೀರು ಪಾಲು

ಕರಾವಳಿ ಕರ್ನಾಟಕ ವರದಿ

ಪುತ್ತೂರು:
ಉಪ್ಪಿನಂಗಡಿ ಸಮೀಪ ನೇತ್ರಾವತಿ ನದಿಯಲ್ಲಿ  ಮೂವರು ಪಿಯುಸಿ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಡಿಸೆಂಬರ್‌ 31 ರಂದು ರಾತ್ರಿ ನಡೆದಿದೆ.

ನೀರು ಪಾಲಾದ ವಿದ್ಯಾರ್ಥಿಗಳನ್ನು ಇಳಂತಿಲದ ಕಡವಿನ ಬಾಗಿಲಿನ ಫಿರ್ಯಾನ್‌, ನೆಲ್ಯಾಡಿಯ ಮೊಹಮದ್‌ ಸುನೈದ್‌ ಮತ್ತು ಪೆರ್ನೆಯ ಸಾಹಿರ್‌ ಎಂದು ಗುರುತಿಸಲಾಗಿದೆ.

ಫಿರ್ಯಾನ್‌ ಬರ್ತ್‌ ಡೇ ಪಾರ್ಟಿಗೆಂದು  ಉಪ್ಪಿನಂಗಡಿ ಜ್ಯೂನಿಯರ್‌ ಕಾಲೇಜಿನ ಕೆಲವು ವಿದ್ಯಾರ್ಥಿಗಳು ನೇತ್ರಾವತಿ ನದಿ ಇರುವ ಪ್ರದೇಶಕ್ಕೆ ಬಂದಿದ್ದಾರೆ. ಬರ್ತ್‌ಡೇ ಕೇಕ್ ಕತ್ತರಿಸಿ ಜನ್ಮದಿನಾಚರಣೆ ಸಂಭ್ರಮ ಆಚರಿಸಿಕೊಂಡಿದ್ದಾರೆ.

ಈ ವೇಳೆ ಫಿರ್ಯಾನ್‌ ಮುಖಕ್ಕೆ ಅಂಟಿಕೊಂಡಿದ್ದ ಕೇಕ್‌ ತೊಳೆಯಲೆಂದು ಅಂತ್ಯಂತ ಆಳದ ಗುಂಡಿಗೆ ಇಳಿದಿದ್ದು ನೀರು ಪಾಲಾಗಿದ್ದಾನೆ. ಜನ್ಮದಿನದಂದೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಇನ್ನುಳಿದ ಇಬ್ಬರು ರಕ್ಷಣೆಗೆಂದು ತೆರಳಿ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳು ಮನೆಗೆ ಮರಳಿ ಬಾರದಿದ್ದಾಗ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದಾಗ ನೀರು ಪಾಲಾಗಿರುವುದು ತಿಳಿದು ಬಂದಿದೆ.

ಅಗ್ನಿ ಶಾಮಕ ದಳದ ಸಿಬಂದಿಗಳು , ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದು ಇಬ್ಬರ ಮೃತ ದೇಹ ಪತ್ತೆಯಾಗಿದೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ