ಮುಸ್ಲಿಮರ ಧಾರ್ಮಿಕ ವಿಷಯದಲ್ಲಿ ಮಧ್ಯಪ್ರವೇಶಿಸಬೇಡಿ: ಕೇಂದ್ರಕ್ಕೆ ಮೆಹಬೂಬಾ ಮುಫ್ತಿ ಎಚ್ಚರಿಕೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಮುಸ್ಲಿಮರ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ತ್ರಿವಳಿ ತಲಾಖ್ ಕುರಿತಾಗಿ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಓರ್ವ ಮುಸ್ಲಿಮ್ ಆಗಿ ಮುರಿದು ಬಿದ್ದ ವಿವಾಹದ ಪರಿಸ್ಥಿತಿಗಳನ್ನು ಎದುರಿಸಿರುವ ಮಹಿಳೆಯಾಗಿ, ಮುಸ್ಲಿಮರ ಕುಟುಂಬದ ರಚನೆಯ ಮೇಲೆ ಪ್ರಹಾರ ನಡೆಯುತ್ತಿದ್ದಾಗ ಮಾತನಾಡಬೇಕಾಗಿರುವುದು ನನ್ನ ಕರ್ತವ್ಯವಾಗಿದೆ ಎಂದು ಮುಫ್ತಿ ಹೇಳಿದ್ದಾರೆ.
 
ಮುಸ್ಲಿಮರಿಗೆ ತಮ್ಮ ಕುಟುಂಬ ರಚನೆಯಾಗಿರುವ ವಿಧಾನದ  ಬಗ್ಗೆ ಹೆಮ್ಮೆ ಇದೆ. ಆದರೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮಸೂದೆ ಮೂಲಕ ಸಮುದಾಯವನ್ನು ಕದಡುವುದಕ್ಕೆ ಯತ್ನಿಸುತ್ತಿದೆ ಎಂದು ಮುಫ್ತಿ ದೂರಿದ್ದಾರೆ.

ತ್ರಿವಳಿ ತಲಾಖ್ ಮಸೂದೆ ಮಹಿಳೆಯರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುತ್ತದೆ, ಮುಸ್ಲಿಮರ ಧಾರ್ಮಿಕ ವಿಷಯದಲ್ಲಿ ಮಧ್ಯಪ್ರವೇಶಿಸಬೇಡಿ ಎಂದು  ಮೆಹಬೂಬಾ ಮುಫ್ತಿ ಎಚ್ಚರಿಕೆ ನೀಡಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ