ಹೊಸ ವರ್ಷಕ್ಕೆ ಹೊಸ ರಾಜಕೀಯ ನಡೆ: ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದೇನು?

ಕರಾವಳಿ ಕರ್ನಾಟಕ ವರದಿ

ಚೆನ್ನೈ:
ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಕಟು ಟೀಕಾಕಾರ ಎಂದು ಗುರುತಿಸಿಕೊಂಡಿರುವ ದಕ್ಷಿಣ ಭಾರತದ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಹೊಸವರ್ಷ 2019ರಲ್ಲಿ ಹೊಸ ರಾಜಕೀಯ ನಡೆಯ ಕುರಿತು ಸುಳಿವು ನೀಡಿದ್ದಾರೆ.

ಹೊಸ ವರ್ಷ 2019ಕ್ಕೆ ಶುಭ ಕೋರಿ ಟ್ವೀತ್ ಮಾಡಿರುವ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುತ್ತಿದ್ದು ಯಾವ ಕ್ಷೇತ್ರದಿಂದ ಎಂದು ಸದ್ಯದಲ್ಲಿಯೇ ವಿವರ ನೀಡುವೆ ಎಂದು ತಿಳಿಸಿದ್ದಾರೆ.

ಹೊಸ ವರ್ಷಕ್ಕೆ ಹೊಸ ಪ್ರಾರಂಭವನ್ನು ಆರಂಭಿಸುತ್ತಿದ್ದೇನೆ. ನನ್ನ ಮೇಲೆ ಹೆಚ್ಚು ಜವಾಬ್ದಾರಿಗಳಿವೆ. ನಿಮ್ಮ ಬೆಂಬಲದೊಂದಿಗೆ ಲೋಕಸಭೆಗೆ ಸ್ವರ್ಧಿಸುತ್ತಿದ್ದೇನೆ.ಅಬ್ ಕಿ ಬಾರ್ ಜನತಾ ಕಾ ಸರ್ಕಾರ್ ಎಂದೂ ಪ್ರಕಾಶ್ ರೈ ಟ್ವೀತ್ ಮಾಡಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ