ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಶೋಷಣೆಯ ವಿಡಿಯೊ ವೈರಲ್: ಶಿಕ್ಷಕನ ಬಂಧನ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಶೋಷಣೆ ನಡೆಸಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಪಾಕನೋರ್ವನನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ನಾರಾವಿಯ ಪ್ರಸಾದ್ ಕೋಟ್ಯಾನ್ ಎಂದು ಗುರುತಿಸಲಾಗಿದೆ.

ಶಾಲೆಯೊಂದರ ಕೊಠಡಿಯಲ್ಲಿ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕವಾಗಿ ಶೋಷಣೆ ನಡೆಸುತ್ತಿದ್ದ ಪ್ರಸಾದ್ ಕೊಟ್ಯಾನ್‌ನ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಈ ವಿಡಿಯೊ ಉಡುಪಿ ಜಿಲ್ಲೆಯ ಜನರನ್ನು ಭಾರಿ ಆತಂಕಕ್ಕೆ ಈಡು ಮಾಡಿತ್ತು.

ವಿದ್ಯಾರ್ಥಿನಿ ಅಥವಾ ಆಕೆಯ ಪೋಷಕರಿಂದ ಈ ಕುರಿತು ಯಾವುದೆ ದೂರು ಬಂದಿರದ ಕಾರಣ ಶಾಲೆಯ ಮುಖ್ಯಸ್ಥರೆ ಈ ಕುರಿತು ದೂರು ದಾಖಲಿಸಿದ್ದರು. ಹೀಗಗೈ ಪೊಲೀಸರು ಈಗ ಶಿಕ್ಷಕ ಪ್ರಸಾದ್ ಕೋಟ್ಯಾನ್ ಅನ್ನು ಬಂಧಿಸಿದ್ದಾರೆ.

ಪ್ರಸಾದ್ ಕೋಟ್ಯಾನ್ ವಿದ್ಯಾರ್ಥಿನಿಯನ್ನು ಲೈಂಗಿಕ ಶೋಷಣೆಗೆ ಒಳಪಡಿಸುವ ಸನ್ನಿವೇಶವನ್ನು ಸ್ವತಃ ತಾನೆ ರೆಕಾರ್ಡ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಇದೇ ರೀತಿ ಈತ ಇನ್ನೂ ಅನೇಕ ವಿದ್ಯಾರ್ಥಿನಿಯರನ್ನು ಶೋಷಣೆಗೆ ಒಳಪಡಿಸಿದ ಅನುಮಾನವಿದ್ದು ಅಂತಹ ಕೃತ್ಯಗಳನ್ನು ತಾನೇ ರೆಕಾರ್ಡ್ ಮಾಡಿ ವಿದ್ಯಾರ್ಥಿನಿಯರನ್ನು ಬೆದರಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎನ್ನಲಾಗುತ್ತಿದೆ.

ಉಡುಪಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೆ ಶಾಲಾ ಬಾಲಕರ ಮೇಲೆ ಸಲಿಂಗಕಾಮಿ ಪತ್ರಕರ್ತ ಚಂದ್ರ ಹೆಮ್ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಜಿಲ್ಲೆಯಾದ್ಯಂತ ಸುದ್ದಿಯಾಗಿತ್ತು. ಚಂದ್ರ ಕೆ ಹೆಮ್ಮಾಡಿಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದು ಸದ್ಯ ಜೈಲಿನಲ್ಲಿದ್ದಾನೆ.  

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ