ಉಡುಪಿ: ಅಬ್ದುಲ್ ಕಲಾಂ ಸಹಿ ಪೋರ್ಜರಿ, ಆರೋಪಿಗೆ ಮೂರು ವರ್ಷ ಸಜೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಅವರ ಸಹಿ ಪೋರ್ಜರಿ ಮಾಡಿ ಅವರ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಎಸಗಿದ ಆರೋಪಿಗೆ ಉಡುಪಿ ಹೆಚ್ಚುವರಿ ಜೆ.ಎಂ.ಎಫ್ಸಿ ಕೋರ್ಟ್ ಮೂರು ವರ್ಷ ಕಠಿಣ ಜೈಲು ಶಿಕ್ಷೆ  ಮತ್ತು ಏಳು ಸಾವಿರ ರೂ. ದಂಡ ವಿಧಿಸಿ ತೀರ್ಪಿತ್ತಿದೆ.

ಕೊಡವೂರು ಗ್ರಾಮದ ಮೂಡಬೆಟ್ಟು ನಿವಾಸಿ ನಿರಂಜನ್ ಚಿದಾನಂದ ಭಟ್(37) ಶಿಕ್ಷೆಗೆ ಒಳಗಾಗಿದ್ದಾನೆ.
ಅಬ್ದುಲ್ ಕಲಾಂ ಅವರಿಗೆ ಕಳಿಸಿದ್ದ ಅಭಿನಂದನಾ ಪತ್ರಕ್ಕೆ ಉತ್ತರವಾಗಿ ಅವರು ಕಳಿಸಿದ್ದ ಪತ್ರದಲ್ಲಿದ್ದ ಸಹಿಯನ್ನು ಚಿದಾನಂದ ಭಟ್ ನಕಲಿ ಮಾಡಿದ್ದ. ಕರಾವಳಿ ಬೈಪಾಸ್ ಬಳಿ ;ಸರ್ಫ್ ಎಂಡ್ ವೀವ್ ಸೈಬರ್ ಕೆಫೆಯಲ್ಲಿ ಕಲಾಂ ಅವರ ಹೆಸರಲ್ಲಿ ನಕಲಿ ಇಮೇಲ್ ಐಡಿ ತಯಾರಿಸಿ ‘ಅಮೇರಿಕನ್ ಇಂಜಿನಿಯರಿಂಗ್ ಆರ್ಗನೈಝೇಷನ್’ ಇಂಜಿನಿಯರ್ ಗಳಿಗೆ ನೀಡುವ ಹೂವರ್ ಪ್ರಶಸ್ತಿಗಾಗಿ ಅಬ್ದುಲ್ ಕಲಾಂ ಅವರೇ ಆರೋಪಿಯ ಹೆಸರನ್ನು ಶಿಫಾರಸು ಮಾಡಿರುವಂತೆ ಪತ್ರ ಕಳಿಸಿದ್ದ. ಕಲಾಂ ಅವರ ನಕಲಿ ಇಮೇಲ್ ಐಡಿಯಿಂದ ನ್ಯೂಯಾರ್ಕ್ ಗೋಸ್ವಾಮಿ ಡಿ.ಯೋಗಿ ಎಂಬವರಿಗೆ ಭಾರತದ ಐವತ್ತು ಎಂಡಬ್ಯು ಸೋಲಾರ್ ಥರ್ಮಲ್ ಪ್ರಾಜೆಕ್ಟ್ ರಿಪೋರ್ಟ್ ಕಳಿಸುವಂತೆ ತಾನೇ ರಾಷ್ಟ್ರಪತಿ ಅಬ್ದುಲ್ ಕಲಾ ಎಂಬಂತೆ ವ್ಯವಹರಿಸಿದ್ದ ಎಂದು ದೂರಲಾಗಿತ್ತು.

ಈ ಬಗ್ಗೆ ಅಂದಿನ ಜಿಲ್ಲಾ ಅಪರಾಧ ಗುಪ್ತ ವಾರ್ತೆ ಪೊಲೀಸ್ ನಿರೀಕ್ಷಕ ಶ್ರೀನಿವಾಸ್ ರಾಜ್ ದೂರಿನಂತೆ ಮೇ.24, 2009ರಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಅಂದೇ ಬಂಧಿಸಲಾಗಿತ್ತು. ಆಗಿನ ಉಡುಪಿ ವೃತ್ತ ನಿರೀಕ್ಷಕರಾಗಿದ್ದ ಗಣೇಶ್ ಹೆಗ್ಡೆ ತನಿಖೆ ನಡೆಸಿದ್ದರು. ಆ ಬಳಿಕ ವೃತ್ತ ನಿರೀಕ್ಷಕರಾಗಿದ್ದ ಎಸ್.ವಿ.ಗಿರೀಶ್ ಅವರು ಅ. 26, 2010 ರಂದು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ