ಜಾಗತಿಕ ಚಿಲ್ಲರೆ ದಿಗ್ಗಜ ಟಾಯ್ಸ್ "ಆರ್" ಅಸ್ ಮಂಗಳೂರು ಮಾರುಕಟ್ಟೆಗೆ ಲಗ್ಗೆ
ಟೇಬಲ್ಸ್ ಇಂಡಿಯಾ, ಟಾಯ್ಸ್ "ಆರ್" ಅಸ್‍ಗೆ ಭಾರತದಲ್ಲಿ ಫ್ರಾಂಚೈಸ್ ಆಗಿದ್ದು, 2021ರೊಳಗೆ 65 ಮಳಿಗೆಗಳನ್ನು ತೆರೆಯಲಿದೆ.

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಕ್ರಿಸ್‍ಮಸ್ ಸಂಭ್ರಮಾಚರಣೆಗೆ ವಿಶ್ವ ಸಜ್ಜಾಗುತ್ತಿದ್ದು, ಇದೀಗ ನಿಮ್ಮ ಆಯ್ಕೆಯ ಆಟಿಕೆ, ಗಿಫ್ಟ್ ಮತ್ತಿತರ ವಸ್ತುಗಳು ಇದೀಗ ಮಂಗಳೂರಿನಲ್ಲೂ ಲಭ್ಯ!

ಅಬುದಾಬಿ ಮೂಲದ ಲೂಲು ಇಂಟರ್‍ನ್ಯಾಷನಲ್ ಸಮೂಹದ ಅಂಗಸಂಸ್ಥೆಯಾದ ಟೇಬಲ್ಸ್ ಇಂಡಿಯಾ, ಜಾಗತಿಕ ಚಿಲ್ಲರೆ ಬ್ರಾಂಡ್ ಟಾಯ್ಸ್ "ಆರ್" ಅಸ್, ಕಳೆದ ವರ್ಷ ಯಶಸ್ವಿಯಾಗಿ ಬೆಳಗಳೂರಿಗೆ ಲಗ್ಗೆ ಇಟ್ಟ ಬಳಿಕ ಹೊಸ ಶಾಖೆಯನ್ನು ಮಂಗಳೂರಿನ ಸಿಟಿ ಸೆಂಟರ್ ಮಾಲ್‍ನಲ್ಲಿ ಇದೀಗ ತೆರೆದಿದೆ.
ಈ ಜಾಗತಿಕ ಚಿಲ್ಲರೆ ಬ್ರಾಂಡ್ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರುಕಟ್ಟೆ ಪಾಲು ಪಡೆಯಲು ಸಜ್ಜಾಗಿದೆ. ಟಾಯ್ಸ್ "ಆರ್" ಅಸ್ ಮಳಿಗೆ, ಆಪ್ಟ್ ವಿಶುವಲ್ ಮರ್ಕೆಂಡೈಸಿಂಗ್ ಸೌಲಭ್ಯದಿಂದ ಸುಸಜ್ಜಿತವಾಗಿದ್ದು, ಇದು ಬಹು ಬ್ರಾಂಡ್‍ಗಳ ಉತ್ಪನ್ನಗಳನ್ನು ಪ್ರದರ್ಶಿಸಲು ಸಾಧ್ಯವಾಗಲಿದೆ. ಕೈಗೆಟುಕುವ ಬೆಲೆಯ ಆಟಿಕೆಗಳಿಂದ ಹಿಡಿದು ಪ್ರಿಮಿಯಂ ಉತ್ಪನ್ನಗಳ ವರೆಗಿನ ಶ್ರೇಣಿ ಇಲ್ಲಿ ಪ್ರದರ್ಶನಕ್ಕಿದೆ. ಈ ಮಳಿಗೆ ಗ್ರಾಹಕರ ಜತೆ ತಡೆರಹಿತ ಸಂಪರ್ಕ ಸಾಧಿಸಲು ಅನುವಾಗುವಂತೆ ಸಂಘಟಿತ ವಲಯವನ್ನು ಹೊಂದಿದೆ. ಇದು ಆ್ಯಕ್ಷನ್ ಚಿತ್ರಗಳಿಂದ ಹಿಡಿದು, ಡಾಲ್, ಪುಸ್ತಕ, ರೋಲ್ ಪ್ಲೇ ಕಿಟ್, ರಿಮೋಟ್ ಚಾಲಿತ ಕಾರು, ಬ್ಲಾಸ್ಟರ್‍ಗಳು, ಪ್ಲಶ್, ವ್ಹೀಲ್ ಸರಕು, ಬೈಕ್, ರೈಡ್ ಆನ್ ಮತ್ತಿತರ ವೈವಿಧ್ಯಮಯ ಶ್ರೇಣಿಯನ್ನು ಇದು ಒಳಗೊಂಡಿದೆ.

ಇತ್ತೀಚಿನ ಸೇರ್ಪಡೆಯಲ್ಲಿ ಶೈಕ್ಷಣಿಕ ಆಟಿಕೆಗಳು, ಕಲೆ ಮತ್ತು ಕುಶಲಕಲೆ, ಪುಸ್ತಕಗಳು, ಗೇಮ್ಸ್ ಮತ್ತು ಒಗಟುಗಳು ಕಲಿಕಾ ವರ್ಗದ ವಿಭಾಗದಲ್ಲಿ ಸೇರಿದ್ದು, ಇದು "ಆಟದ ಸಮಯಕ್ಕೆ ಅವಕಾಶ ಮಾಡಿಕೊಳ್ಳಿ" ಎಂಬ ಕಂಪನಿಯ ಸಿದ್ಧಾಂತಕ್ಕೆ ಅನುಗುಣವಾಗಿರುತ್ತದೆ. ಈ ಮೂಲಕ ಆಟಿಕೆಗಳು ಮಕ್ಕಳ ಜೀವನದ ಭಾಗವಾಗಿ ಮಾಡುವುದು ಇದು ಉದ್ದೇಶ. ಮಗು ಸೃಜನಶೀಲತೆ ಹೆಚ್ಚಿಸಿಕೊಳ್ಳುವುದನು ಕಲಿಯಲು, ಕಲಿಕೆಗೆ ಮತ್ತು "ಸ್ಮಾರ್ಟ್ ಆಟ" ಆರಂಭಿಸಲು ಇದು ಅನುವು ಮಾಡಿಕೊಡುತ್ತದೆ.

ಬೇಬೀಸ್ "ಆರ್" ಅಸ್ ವಿಭಾಗವು ಮಗುವಿನ ನಿರೀಕ್ಷೆಯಲ್ಲಿರುವ ಭಾವಿ ತಾಯಂದಿರಿಗೆ, ಯುವ ಪೋಷಕರಿಗೆ ಅತ್ಯುತ್ಕೃಷ್ಟ ಗಮ್ಯತಾಣವಾಗಿದ್ದು, ಇಲ್ಲಿ ಡ್ಯಾಪರ್, ಆಹಾರ, ಒರೆಸುವ ಬಟ್ಟೆಗಳು ಮತ್ತು ಮಗುವಿನ ಪೋಷಣೆಗೆ ಪೋಷಕರಿಗೆ ಅಗತ್ಯವಾದ ಬಹುತೇಕ ಎಲ್ಲ ಉತ್ಪನ್ನಗಳ ವೈವಿಧ್ಯಮಯ ಶ್ರೇಣಿಯನ್ನು ಹೊಂದಿದೆ. ಈ ಮಳಿಗೆಯಲ್ಲಿ ಶಿಶುಗಳ ಉತ್ಪನ್ನಗಳಾದ ಮಗುವಿನ ಹಾಸಿಗೆ, ಹೊದಿಕೆ, ಪ್ರಯಾಣ ಸಾಮಗ್ರಿಗಳು, ಸುರಕ್ಷತೆಗೆ ಅಗತ್ಯವಾದ ಉತ್ಪನ್ನಗಳು, ಶಿಶು ಆರೈಕೆ ಉತ್ಪನ್ನಗಳು, ವಿಶೇಷವಾಗಿ ಮಕ್ಕಳ ಸಿದ್ಧ ಉಡುಪುಗಳೂ ಲಭ್ಯ.

ಎಲ್ಲ ಜನಾಕರ್ಷಣೆಯ ಅದರಲ್ಲೂ ಮುಖ್ಯವಾಗಿ ಮಕ್ಕಳ ಪ್ರಮುಖ ಕೇಂದ್ರಬಿಂದುವೆಂದರೆ ಜಿಯೋಫ್ರೆ ಎಂಬ ಜಿರಾಫೆ. ಇದು ಹಲವು ದಶಕಗಳಿಂದ ಜಾಗತಿಕವಾಗಿ ಟಾಯ್ಸ್ "ಆರ್" ಅಸ್ ಬ್ರಾಂಡ್‍ನ ಅಧಿಕೃತ ಲಾಂಛನವಾಗಿದೆ. ಈ ಮಳಿಗೆಯು ಜಿಯೋಫ್ರೆ ಹುಟ್ಟುಹಬ್ಬ ಕ್ಲಬ್ ಮೂಲಕ ಪ್ರತಿ ತಿಂಗಳು ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುತ್ತಿದೆ.

ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಟೇಬಲ್ಸ್ ಇಂಡಿಯಾ ಆಡಳಿತ ನಿರ್ದೇಶಕ ಅದೀಬ್ ಅಹ್ಮದ್ ಅವರು, "ಸಕಾಲಿಕವಾದ ಪರಂಪರೆಯ ಅಡಿಪಾಯದ ಆಧಾರದಲ್ಲಿ, ಟೇಬಲ್ಸ್ ಇಂಡಿಯಾ ಭಾರತದ 2 ಮತ್ತು 3ನೇ ಸ್ತರದ ನಗರಗಳಲ್ಲಿ ವಿಸ್ತರಿಸುವ ಯೋಜನೆ ಹಮ್ಮಿಕೊಂಡು, ಕರ್ನಾಟಕದ ಆಕರ್ಷಕ ನಗರವಾದ ಮಂಗಳೂರಿಗೆ ಲಗ್ಗೆ ಇಟ್ಟಿದೆ. ಈ ಭಾಗದ ಆರ್ಥಿಕತೆಯು ನಗರ ಅಭಿವೃದ್ಧಿಗಾಗಿ ಉದ್ದಿಮೆಗಳು, ವಾಣಿಜ್ಯ ಚಟುವಟಿಕೆಗಳು, ಕೃಷಿ ಸಂಸ್ಕರಣೆ ಮತ್ತು ಬಂದರು ಸಂಬಂಧಿ ಚಟುವಟಿಕೆಗಳನ್ನು ಅವಲಂಬಿಸಿದೆ" ಎಂದು ಹೇಳಿದರು.

ಸಂಘಟಿತ ಚಿಲ್ಲರೆ ವಲಯದಲ್ಲಿ ಬಳಸಿಕೊಳ್ಳದ ಪ್ರಗತಿ ಅವಕಾಶಗಳಿದ್ದು, ಮಂಗಳೂರು ನಗರದಲ್ಲಿ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಆದ್ದರಿಂದ ಟೇಬಲ್ಸ್ ಇಂಡಿಯಾ, ಮಂಗಳೂರನ್ನು ತನ್ನ ಗಮ್ಯಸ್ಥಾನವಾಗಿ ಆಯ್ಕೆ ಮಾಡಿಕೊಂಡಿದೆ. ಭಾರತದ 2ನೇ ಮತ್ತು 3ನೇ ಸ್ತರದ ನಗರಗಳಲ್ಲಿ ಪ್ರಗತಿಯ ಯಶೋಗಾಥೆಯನ್ನು ಆರಂಭಿಸುವ ಸಂತಸದ ಕ್ಷಣ ಇದಾಗಿದೆ. ನಮ್ಮ ಸದೃಢ ಪ್ರಗತಿ ಹಂತದಿಂದ ಮತ್ತಷ್ಟು ಸದೃಢಗೊಳ್ಳುವ ಪ್ರಗತಿ ಹಂತವನ್ನು ತಲುಪುವುದು ನಮ್ಮ ಉದ್ದೇಶವಾಗಿದೆ" ಎಂದು ವಿವರಿಸಿದರು.

ಟೇಬಲ್ಸ್ ಬಗ್ಗೆ:
ಚಿಲ್ಲರೆ ಉದ್ಯಮದ ದೈತ್ಯ ಕಂಪನಿಯಾದ ಲೂಲು ಗ್ರೂಪ್ ಇಂಟರ್‍ನ್ಯಾಷನಲ್‍ನ ಸಂಘಟಿತ ಚಿಲ್ಲರೆ ವಿಭಾಗವಾದ ಟೇಬಲ್ಸ್, ಎಫ್ & ಬಿ, ಆಟಿಕೆಎಗಳು, ಲೈಫ್‍ಸ್ಟೈಲ್ ಮತ್ತು ಸಿದ್ಧ ಉಡುಪುಗಳ ಅಗ್ರಗಣ್ಯ ಬ್ರಾಂಡ್‍ಗಳನ್ನು ಭಾರತಕ್ಕೆ ಪರಿಚಯಿಸಿದೆ. ಸ್ಪ್ರಿಂಗ್‍ಫೀಲ್ಡ್, ವುಮೆನ್ಸ್ ಸೀಕ್ರೆಟ್, ಟಾಯ್ಸ್ "ಆರ್" ಅಸ್ ಮತ್ತು ಬೇಬೀಸ್ "ಆರ್" ಅಸ್‍ನಂಥ ವಿಶೇಷ ಬ್ರಾಂಡ್‍ಗಳನ್ನು ತರುವ ನಿಟಿಟನಲ್ಲಿ ಕಂಪನಿಯು ಮಾಸ್ಟರ್ ಫ್ರಾಂಚೈಸಿ ಒಪ್ಪಂದಗಳನ್ನು ಮಾಡಿಕೊಂಡಿದೆ.

ಟೇಬಲ್ಸ್ ಇತ್ತೀಚೆಗೆ ಚೀನಾದ ಲೈಫ್‍ಸ್ಟೈಲ್ ಬ್ರಾಂಡ್ ಯೊಯೊಸೊ ಮಳಿಗೆಗಳನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಅದರ ಜತೆಗೆ ಪ್ರಮುಖ ಸಹಕಾರ ಒಪ್ಪಂದ ಮಾಡಿಕೊಂಡಿದೆ. ಎಫ್ & ಬಿ ವಲಯದಲ್ಲಿ ಟೇಬಲ್ಸ್, ಕೋಲ್ಡ್ ಸ್ಟೋನ್ ಜರ್ಮನಿ ಮತ್ತು ಗ್ಯಾಲಿಟೋಸ್‍ಜ ಫ್ರಾಂಚೈಸಿ ಹಕ್ಕುಗಳನ್ನು ಹೊಂದಿದೆ. ಇದರ ಜತೆಗೆ ಬ್ಲೂಮ್ಸ್‍ಬರೀಸ್ ಮತ್ತು ಪೆಪ್ಪರ್‍ಮಿಲ್ ಎಂಬ ಎರಡು ದೇಶಿ ಬ್ರಾಂಡ್‍ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಟೇಬಲ್ಸ್ ಜಾಗತಿಕವಾಗಿ 60 ಮಳಿಗೆಗಳನ್ನು ಪ್ರಸ್ತುತ ಹೊಂದಿದ್ದು, 2021ರ ಒಳಗಾಗಿ 250 ಮಳಿಗೆಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ.

ಟಾಯ್ಸ್ "ಆರ್" ಅಸ್ & ಬೇಬೀಸ್ "ಆರ್" ಅಸ್ ಬಗ್ಗೆ:
ಆಟಿಕೆಗಳ ವ್ಯವಹಾರದಲ್ಲಿ 65 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಟಾಯ್ಸ್ "ಆರ್" ಅಸ್ ಇನ್‍ಕಾರ್ಪೊರೇಷನ್, ವಿಶ್ವದ ಅಗ್ರಗಣ್ಯ ಆಟಿಕೆ ಮತ್ತು ಶಿಶು ಉತ್ಪನ್ನಗಳ ಚಿಲ್ಲರೆ ಮಳಿಗೆಯಾಗಿದೆ. ವೈವಿಧ್ಯಮಯ ಬ್ರಾಂಡ್ ಕುಟುಂಬಗಳೊಂದಿಗೆ ವಿಭಿನ್ನ ಶಾಂಪಿಂಗ್ ಅನುಭವ ಒದಗಿಸುತ್ತಾ ಬಂದಿದೆ. ಜಾಗತಿಕವಾಗಿ ಮಾರಾಟ ಜಾಲವನ್ನು ಹೊಂದಿರುವ ಟಾಯ್ಸ್ "ಆರ್" ಅಸ್, ಪೋಷಕರು ಮತ್ತು ಮಕ್ಕಳ ತಲೆಮಾರುಗಳಿಗೆ ಅಧಿಕಾರಯುಕ್ತ ಆಟಿಕೆ ಬ್ರಾಂಡ್ ಆಗಿದೆ. ಚಾಲ್ರ್ಸ್ ಲಝರಸ್ ಸಂಸ್ಥಾಪನೆ ಮಾಡಿದ ಟಾಯ್ಸ್ "ಆರ್" ಅಸ್, ಗುಣಮಟ್ಟ, ಮೌಲ್ಯ ಮತ್ತು ಆಯ್ಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಎಗಳನ್ನು ತಂದಿದೆ. ಜತೆಗೆ ಆಟಿಕೆ ವಹಿವಾಟಿನ ಯಶಸ್ಸು ದೈನಂದಿನ ಶಾಪರ್‍ಗಳ ಮೇಲೆ ಕೇಂದ್ರೀಕರಿಸುವ ಮೂಲಕ ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿಕೊಂಡಿದೆ. ಇ-ಕಾಮರ್ಸ್ ಸೈಟ್‍ಗಳ ಪ್ರಬಲ ಶ್ರೇಣಿಯನ್ನು ಹೊಂದಿರುವ ಕಂಪನಿ, ವೈವಿಧ್ಯಮಯ ಆಟಿಕೆ ಮತ್ತು ಮಕ್ಕಳ ಉತ್ಪನ್ನಗಳಲ್ಲಿ ಶಾಪರ್‍ಗಳಿಗೆ ವಿಸ್ತøತವಾದ ಆನ್‍ಲೈನ್ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದೆ. ಕಂಪನಿಯ ಕೇಂದ್ರ ಕಚೇರಿ ನ್ಯೂಜೆರ್ಸಿಯ ವೇನ್‍ನಲ್ಲಿದೆ. ತನ್ನ ಕ್ಲಾಸಿಕ್, ಬೇಡಿಕೆಗೆ ಅನುಗುಣವಾದ ಮತ್ತು ವಿಶಿಷ್ಟ ಮಾರಾಟ ಅನುಭವ & ಅನುಭವಿ, ನುರಿತ ಮಾರಾಟ ಸಿಬ್ಬಂದಿಯ ಮೂಲಕ ಗ್ರಾಹಕರಿಗೆ ಸ್ಮರಣೀಯ ಶಾಪಿಂಗ್ ಅನುಭವ ಒದಗಿಸುವ ಆದರ್ಶಕ್ಕೆ ಗಮನ ಹರಿಸಿದೆ. ತನ್ನ ಅತ್ಯಾಕರ್ಷಕ ಲಾಂಛನವಾದ ಜಿಯೊಫ್ರೇಯ ವಿಶೇಷ ಆಕರ್ಷಣೆಯನ್ನು ಒಳಗೊಂಡ ಕಂಪನಿ, ಆಕರ್ಷಣೀಯ "ಐ ಡೋಂಟ್ ವಾಂಟ್ ಟೂ ಗ್ರೋ ಅಪ್, ಐ ಆ್ಯಮ್ ಎ ಟಾಯ್ಸ್ "ಆರ್" ಅಸ್ ಕಿಡ್ ವಾಕ್ಯದೊಂದಿಗೆ 1960ರ ಫೆಬ್ರುವರಿಯಲ್ಲಿ ಇದನ್ನು ಪರಿಚಯಿಸಿದೆ. ಟಾಯ್ಸ್ "ಆರ್" ಅಸ್ ವಿಶ್ವದಲ್ಲೇ ಅತ್ಯಂತ ಚಿರಪರಿಚಿತ ಹಾಗೂ ಗೌರವಾರ್ಹ ಬ್ರಾಂಡ್ ಆಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ಕಾನ್ಸೆಪ್ಟ್ ಪಬ್ಲಿಕ್ ರಿಲೇಶನ್ಸ್
ರವಣನ್ @ 77952 13926 / ಅರ್ಚನಾ @ 9845541244

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ