15 ಕಂಪೆನಿಗಳ ಔಷಧ ಉತ್ಪನ್ನಗಳಿಗೆ ರಾಜ್ಯ ಸರ್ಕಾರ ನಿಷೇಧ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು
: ಜೀವಕ್ಕೆ ಮಾರಕವಾಗಿರುವ  15 ಕಂಪನಿಗಳ ಔಷಧ ಉತ್ಪನ್ನಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ರಾಜ್ಯ ಔಷಧಿ ಪರೀಕ್ಷಾ ಪ್ರಯೋಗಾಲಯ, ಗುಣಮಟ್ಟ ನಿಯಂತ್ರಣಾ ಸಂಸ್ಥೆ ಪ್ರಕಟಿಸಿದೆ.

ಚೆನ್ನೈನ ಕೌಶಿಕ್ ಥೆರಾಪಿಯೋಟಿಕ್ ಕಂಪೆನಿಯ ಮೈಮಿಡಿ ಅಲ್ಫಾಲಿಫೋಯಿಕ್ ಆ್ಯಸಿಡ್, ಫೈರೋಡೆಕ್ಸ್‌ನ ಹೈಡ್ರೋಕ್ಲೋರೈಡ್, ಮೈಥೆಲ್ ಕೋಬಾಲ್ಮಿನ್, ಫೋಲಿಕ್ ಆ್ಯಸಿಡ್ ಮತ್ತು ವಿಟಮಿನ್ ಡಿ3 ಟ್ಯಾಬ್ಲೆಟ್, ಹರಿದ್ವಾರದ ಮೆಡಿಕ್‌ಕಮ್ಯಾನ್ ಬಯೋಟೆಕ್‌ನ ಲೋಡನ್ ಟ್ಯಾಬ್ಲೆಟ್, ಫ್ರಾನ್ಸ್‌ನ ರೆಮಿಡೀಸ್ ಅಸಕೇರ್-ಪಿ, ಉತ್ತರ ಪ್ರದೇಶದ ಸಿಸ್ಟೊಕೆಮ್ ಲ್ಯಾಬೋರೇಟರೀಸ್‌ನ ಇರೋಸಕ್ ಇಂಜೆಕ್ಷನ್, ಐರನ್ ಸಕ್ರೋಸ್ ಇಂಜೆಕ್ಷನ್ ಯುಎಸ್ಪಿ, ವಿಗೋರ ಮಲ್ಟಿಟೆಕ್ಸರ್ ಕಾಂಡೋಮ್ಸ್ ಮಾರಾಟಕ್ಕೆ ಅವಕಾಶವಿಲ್ಲ.


ಬೆಂಗಳೂರಿನ ಕರ್ನಾಟಕ ಆ್ಯಂಟಿಬಯೋಟಿಕ್ ಮತ್ತು ಫಾರ್ಮಸ್ಯುಟಿಕಲ್‌ನ ಆಕ್ಸಿಟೋಸಿನ್ ಇಂಜೆಕ್ಷನ್ ಐಪಿ (5 ಐಯು), ಹಿಮಾಚಲ ಪ್ರದೇಶದ ಆಲಿಯನ್ ಬಯೋಟೆಕ್‌ನ ಎನ್ ಫಾರ್ ಟ್ಯಾಬ್ಲೆಟ್ (ನಿಮೋಸಲೈಡ್ ಆಂಡ್ ಪ್ಯಾರಾಸಿಟಿಮಲ್), ಹಿಮಾಚಲ ಪ್ರದೇಶದ ಜಿಜಿ ನ್ಯೂಟ್ರೀಷಿಯನ್ ಲೀಲಾರೆ ಫೋಡ್ ಸಿಎಲ್ ಹಾಗೂ ಲೈಫ್ ವಿಷನ್ ಹೆಲ್ತ್‌ಕೇರ್‌ನ ಫಿಡಾಕ್ಸ್ ಎಝೆಡ್ ನೆಫೋಫೋಡೆಕ್ಸ್ (200 ಎಂಜಿ ಮತ್ತು ಅಜಿತ್ರೋಮೈಸಿನ್ 250 ಎಂಜಿ), ವೆನಾಸ್ ಬಯೋಸೈನ್ಸ್‌ನ ಅಜಿತ್ರೋಮೈಸಿನ್ ಟ್ಯಾಬ್ಲೆಟ್ ಐಪಿ 500 ಎಂಜಿ (ಎಝೆಡ್ ಐಟಿ-500), ಶ್ರೀಸಾಯಿ ಬಾಲಾಜಿ ಫಾರ್ಮಸ್ಯುಟಿಕಲ್ಸ್‌ನ ಅಮಾಕ್ಸಲಿನ್ ಮತ್ತು ಪೊಟಾಶಿಯಂ ಕ್ಲಾವುಲಾನೇಟ್ ಟ್ಯಾಬ್ಲೆಟ್ ಐಪಿ (ಝೋಮೋಕ್ಸ್-ಸಿವಿ 625), ಅಸೆಜೆನರಿಕ್ ಎಲ್ಎಲ್ಪಿನ ರಿಯಾಕ್ಷನ್ -50, ಡೈಕ್ಲೊಫೆನಾಕ್ ಸೋಡಿಯಂ ಟ್ಯಾಬ್ಲೆಟ್ ಐಪಿ -50. ತಮಿಳುನಾಡಿನ ಗೋಮತಿ ಶಂಕರ್ ಸರ್ಜಿಕಲ್ಸ್‌ನ ಡೋಲರ್ ಬ್ಯಾಂಡೇಜ್ ಸ್ಕೆಡ್ನೂಲ್ ಎಫ್, ಹಿಮಾಚಲ ಪ್ರದೇಶದ ಅಲ್ಟ್ರಾಡ್ರಗ್ಸ್‌ನ ಸೆಫೋಡೆಕ್ಸೋಮ್ ಮತ್ತು ಫೋಕ್ಯಾಸಿನ್ ಟ್ಯಾಬ್ಲೆಟ್, ಉತ್ತರಾಕಾಂಡದ ಸಿನೇಟ್ ಲ್ಯಾಬರೇಟರೀಸ್‌ನ ಜನಿಕ್ಸಿನ್ 200 ಟ್ಯಾಬ್ಲೆಟ್ ಔಷಧಿಗಳನ್ನು ನಿಷೇಧಿಸಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ