ಮೂಡುಬೆಳ್ಳೆ ಅಪಘಾತ ಪ್ರಕರಣ :1.15 ಕೋ.ರೂ. ಪರಿಹಾರಕ್ಕೆ ಆದೇಶ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಟಿಪ್ಪರ್ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಪ್ರಕರಣದಲ್ಲಿ 1.15 ಕೋ.ರೂ. ಪರಿಹಾರ ನೀಡುವಂತೆ ವಿಮಾ ಸಂಸ್ಥೆಗೆ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು (ಹಿರಿಯ ವಿಭಾಗ) ಆದೇಶಿಸಿದ್ದಾರೆ.

ಆ.2, 2016ರಂದು ಬೆಳಿಗ್ಗೆ ಮೂಡುಬೆಳ್ಳೆಯ ಜೆರಾಲ್ಡ್ ಮತ್ತು ಮಾರ್ಗರೇಟ್ ದಂಪತಿ ಪುತ್ರ ಜಾನ್ಸನ್ ಮೈಕಲ್ ಡಿ'ಸೋಜಾ (28) ಅವರು ಬೈಕಿನಲ್ಲಿ ಹೋಗುತ್ತಿದ್ದಾಗ ಗಣಪನಕಟ್ಟೆಯಲ್ಲಿ ಅತಿವೇಗವಾಗಿ ಬಂದ ಟಿಪ್ಪರ್ ಢಿಕ್ಕಿ ಹೊಡೆದು ಮೃತಪಟ್ಟಿದ್ದರು. ಈ ಬಗ್ಗೆ ಪರಿಹಾರ ಕೋರಿ ಉಡುಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

1,15,96,800 ರೂ. ಹಾಗೂ ಶೇ. 6.1 ಬಡ್ಡಿ ಮತ್ತು ಖರ್ಚು ನೀಡುವಂತೆ ವಿಮಾ ಕಂಪೆನಿಗೆ  ನ್ಯಾಯಾಲಯ ಆದೇಶಿಸಿದೆ. ನ್ಯಾಯವಾದಿ ಅಲೆವೂರು ಪ್ರೇಮರಾಜ್ ಕಿಣಿ ಅರ್ಜಿದಾರರ ಪರ ವಾದಿಸಿದ್ದರು.

ಜಾನ್ಸನ್ ಅವರು ದುಬೈಯಲ್ಲಿ ಉನ್ನತ ಉದ್ಯೋಗದಲ್ಲಿದ್ದು, ಜುಲೈ 31ರಂದು ರಜೆಯಲ್ಲಿ ಊರಿಗೆ ಬಂದಿದ್ದರು. ಶಿರ್ವ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿದ್ದರು

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ