ಬಸ್‌ನಲ್ಲಿ ದನದ ಮಾಂಸ: ಇಬ್ಬರ ಬಂಧನ, ಬಸ್ ವಶ

ಕರಾವಳಿ ಕರ್ನಾಟಕ ವರದಿ

ಬ್ರಹ್ಮಾವರ:
ಮಿನಿ ಬಸ್ ನಲ್ಲಿ ಹದಿನೈದು ಕೆಜಿ ದನದ ಮಾಂಸವನ್ನು ಶಿವಮೊಗ್ಗದಿಂದ ಹೆಬ್ರಿ ಮಾರ್ಗದಲ್ಲಿ ಉಡುಪಿಗೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅನುಸರಿಸಿ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದು, ಬಸ್ ವಶಕ್ಕೆ ಪಡೆದಿದ್ದಾರೆ.

‘ಉಡುಪಿಯಲ್ಲಿ ಕೊಡಿ’ ಎಂದು ಬಸ್ ಚಾಲಕ ರಿಜ್ವಾನ್ ಅವರ ಬಳಿ ದೊಡ್ಡ ಪಾರ್ಸೆಲ್ ಒಂದನ್ನು ನೀಡಿದ್ದಾರೆ. ಬಸ್ಸನ್ನು ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿಯವರು ಹೆಬ್ರಿಯಲ್ಲಿ ವಶಕ್ಕೆ ಪಡೆದು, ಇವರು ಸಾಗಿಸುತ್ತಿರುವುದು ದನದ ಮಾಂಸ ಎಂಬ ಶಂಕೆಯಲ್ಲಿ ಚಾಲಕ ರಿಜ್ವಾನ್ ಮತ್ತು ನಿರ್ವಾಹಕ ದೀಪಕ್ ಎಂಬವರನ್ನು ಬಂಧಿಸಿದ್ದಾರೆ.

ಪೊಲೀಸರು ವಶಪಡಿಸಿಕೊಂಡಿರುವುದು ದನದ ಮಾಂಸವೇ ಎಂಬುದನ್ನು ಖಚಿತಪಡಿಸಲು ಮಾಂಸವನ್ನು ವಿಧಿ ವಿಜ್ನಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ಹೆಬ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ