ಉಡುಪಿ: ಪತ್ನಿಗೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆಗೈದ ಪೊಲೀಸ್

ಕರಾವಳಿ ಕರ್ನಾಟಕ ವರದಿ

ಉಡುಪಿ
: ಎಸ್ಪಿ ಕಚೇರಿಯ ನಿಸ್ತಂತು ವಿಬಾಗದ ಪೊಲೀಸ್ ಸಹಾಯಕ ಉಪನಿರೀಕ್ಷಕರೋರ್ವರು ಮೊಬೈಲ್ ಚಾಟಿಂಗ್ ಆಕ್ಷೇಪಿಸಿದ ಪತ್ನಿಗೆ ಕ್ರಿಕೆಟ್ ಬ್ಯಾಟಿಂದ ಹಲ್ಲೆಗೈದ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಸಹಾಯಕ ಉಪ ನಿರೀಕ್ಷಕ ಕೆ.ಎಸ್.ಹರೀಶ್ಚಂದ್ರ ಅವರು ಪತ್ನಿ, ಮಣಿಪಾಲ ಅನಂತನಗರದ ಪೊಲೀಸ್ ವಸತಿಗೃಹದ ನಿವಾಸಿ ಎ.ಬಿ.ಸುಧಾ ಎಂಬವರಿಗೆ ಹಲ್ಲೆಗೈದಿದ್ದಾರೆ ಎನ್ನಲಾಗಿದೆ.

ಸುಧಾ ಅವರು ಗಂಡನ ಮೊಬೈಲ್ ನೋಡಿದ್ದು, ನೀವ್ಯಾಕೆ ಬೇರೆ ಮಹಿಳೆಯರೊಂದಿಗೆ ಚಾಟಿಂಗ್ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಹರೀಶ್ಚಂದ್ರ ಕೋಪದಿಂದ ಸಮೀಪದಲ್ಲಿದ್ದ ಬ್ಯಾಟ್ ನಿಂದ ಪತ್ನಿ ಸುಧಾರ ತಲೆ, ಕೈ ಕಾಲಿಗೆ ಹೊಡೆದು ಅವಾಚ್ಯವಾಗಿ ನಿಂದಿಸಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ದಿನದಿಂದಲೂ ಹರೀಶ್ಚಂದ್ರ ಪತ್ನಿಗೆ ಸಣ್ಣ ವಿಷಯಕ್ಕೂ ನಿಂದಿಸಿ ದೈಹಿಕ ಕಿರುಕುಳ ನೀಡುವ ಚಾಳಿ ಹೊಂದಿದ್ದರು ಎಂದು ದೂರಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ