ಐದು ರಾಜ್ಯಗಳಲ್ಲೂ ಬಿಜೆಪಿಗೆ ಬೇಸರ: ಮತದಾನೋತ್ತರ ಸಮೀಕ್ಷೆಗಳಲ್ಲಿ ಬಹಿರಂಗ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
  ರಾಜಸ್ಥಾನ, ತೆಲಂಗಾಣ, ಮಿಜೋರಂ, ಛತ್ತೀಸ್‌ಘಡ್, ಮಧ್ಯಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಮುಗಿದಿದ್ದು ಈ ಚುನಾವಣೆಗಳ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದೆ. ಬಿಜೆಪಿಗೆ ಅಷ್ಟೇನೂ ಹಿತಕರವಲ್ಲದ ವರದಿಯನ್ನು ಸಮೀಕ್ಷೆಗಳು ನೀಡುತ್ತಿವೆ. ಐದು ರಾಜ್ಯಗಳಲ್ಲಿಯೂ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗುತ್ತದೆ ಎಂದು ಸಮೀಕ್ಷೆ ಹೇಳುತ್ತಿದೆ.

ರಾಜಸ್ಥಾನ, ತೆಲಂಗಾಣ, ಮಿಜೋರಂ, ಛತ್ತೀಸ್‌ಘಡ್, ಮಧ್ಯಪ್ರದೇಶ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಯ ಪುರ್ಣ ವರದಿ ಇಲ್ಲದೆ.

ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಗದ್ದುಗೆ ಹಿಡಿಯಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳುತ್ತಿವೆ. ಪೋಲ್‌ ಆಫ್‌ ದಿ ಪೋಲ್ಸ್‌ ಪ್ರಕಾರ ಬಿಜೆಪಿ 82 ರ ಆಸುಪಾಸಿಗೆ ಓಟ ನಿಲ್ಲಿಸಲಿದೆ. ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿದ್ದು 108ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ. ಇನ್ನು ಇತರೆ ಪಕ್ಷಗಳು 8-10 ಸ್ಥಾನ ಪಡೆಯಬಹುದು ಎಂದು ವರದಿ ಹೇಳುತ್ತಿದೆ.

ಕಳೆದ 15 ವರ್ಷದಿಂದ ಬಿಜೆಪಿ ತೆಕ್ಕೆಯಲ್ಲಿರುವ ಮಧ್ಯಪ್ರದೇಶದಲ್ಲಿ ಈ ಬಾರಿ ಅಧಿಕಾರ ಪಲ್ಲಟ ಆಗುತ್ತದೆಯೆಂದು ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ. ಬಿಜೆಪಿಯ ಶೇಕಡಾವಾರು ಮತದಲ್ಲಿ ಭಾರಿ ಕುಸಿತ ಆಗಿದೆ ಎನ್ನುತ್ತಿವೆ ಸಮೀಕ್ಷೆಗಳು. ಬಿಜೆಪಿ 40% ಮತ ಗಳಿಸಿದರೆ, ಕಾಂಗ್ರೆಸ್‌ 43% ಮತಗಳಿಸುತ್ತದೆ. ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಾಯಂ ಆದರೆ ಬಹುಮತ ಬರುವ ಬಗ್ಗೆ ಸಮೀಕ್ಷೆಯ ವರದಿಯಿಂದ ಅನುಮಾನ ಏಳುತ್ತಿದೆ.

ತೆಲಂಗಾಣ ರಾಜ್ಯದಲ್ಲಿ ಕೆ.ಚಂದ್ರಶೇಖರ್ ರಾವ್ ಅವರೇ ಮತ್ತೊಮ್ಮೆ ಸಿಎಂ ಆಗುವ ಸಾಧ್ಯತೆ ಹೆಚ್ಚಿಗಿದೆ ಎನ್ನುತ್ತಿದೆ ಚುನಾವಣೋತ್ತರ ಸಮೀಕ್ಷೆ. ಕಾಂಗ್ರೆಸ್‌ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಉತ್ತಮ ಫಸಲು ಗಳಿಸಲು ವಿಫಲವಾಗಿದೆ. ಬಿಜೆಪಿ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಟಿಎಸ್‌ಆರ್‌ ಪಕ್ಷ 66 ಸ್ಥಾನ ಪಡೆದರೆ, ಟಿಡಿಪಿ ಮತ್ತು ಕಾಂಗ್ರೆಸ್‌ ಜಂಟಿಯಾಗಿ 39 ಬಿಜೆಪಿ 5 ಹಾಗೂ ಇತರೆ ಪಕ್ಷಗಳು 9 ಸ್ಥಾನವನ್ನಷ್ಟೆ ಗಳಿಸುತ್ತವೆ ಎನ್ನುತ್ತಿವೆ ಸಮೀಕ್ಷೆ.

ಛತ್ತೀಸ್‌ಘಡದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲು ಮೈತ್ರಿಯ ಮೊರೆಹೋಗಬೇಕಾಗುತ್ತದೆ. ಅದೇ ಮೈತ್ರಿಯ ಅವಕಾಶ ಕಾಂಗ್ರೆಸ್‌ಗೂ ಎನ್ನುತ್ತಿವೆ ಸಮೀಕ್ಷೆ ವರದಿಗಳು. ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಛತ್ತೀಸ್‌ಘಡ್‌ನಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ 43 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿಯು 40 ಮತ್ತು ಇತರೆ ಪಕ್ಷಗಳು 6 ಸ್ಥಾನದಲ್ಲಿ ಗೆಲುವು ಸಾಧಿಸಲಿವೆ. ಬಹುಮತಕ್ಕೆ 46 ಸ್ಥಾನಗಳನ್ನು ಪಡೆಯಬೇಕಿದೆ.

ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಕೊನೆಯ ಈಶಾನ್ಯ ರಾಜ್ಯ ಮಿಜೋರಂನಲ್ಲಿ ಅದು ತನ್ನ ಅಧಿಕಾರ ಕಳೆದುಕೊಳ್ಳಲಿದೆ ಎನ್ನುತ್ತಿವೆ ಚುನಾವಣೋತ್ತರ ಸಮೀಕ್ಷೆಗಳು. ಆದರೆ ಪ್ರತಿಪಕ್ಷ ಎಂಎನ್‌ಎಫ್‌ಗೂ ಪೂರ್ಣ ಬಹುಮತ ಬರುವ ಸಾಧ್ಯತೆ ಇಲ್ಲಿ ಕಡಿಮೆ ಎನ್ನಲಾಗುತ್ತಿದೆ. ಇನ್ನು ಬಿಜೆಪಿಯು ಇಲ್ಲಿ ಖಾತೆ ತೆರೆದರೇ ದೊಡ್ಡ ಸಂಗತಿ. 40 ಕ್ಷೇತ್ರಗಳಿರುವ ಇಲ್ಲಿ ಬಹುಮತಕ್ಕೆ 21 ಬೇಕು ಆದರೆ ಕಾಂಗ್ರೆಸ್‌ ಆಗಲಿ, ಎಂಎನ್‌ಎಫ್‌ (ಮಿಜೋ ನ್ಯಾಷನಲ್ ಫ್ರಂಟ್‌) ಮ್ಯಾಜಿಕ್ ನಂ ಮುಟ್ಟುವುದು ಅನುಮಾನ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ