ಕ್ರಿಕೆಟ್ ಬದುಕಿಗೆ ಗೌತಮ್ ಗಂಭೀರ್ ವಿದಾಯ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಭಾರತ ತಂಡದ ಹಿರಿಯ ಆಟಗಾರ ಗೌತಮ್ ಗಂಭೀರ್(37) ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಗುರುವಾರ ಆಂಧ್ರಪ್ರದೇಶ ಎದುರಿನ ರಣಜಿ ಪಂದ್ಯ ತನ್ನ ಕೊನೆಯ ಪಂದ್ಯ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಟ್ವಿಟರ್ ನಲ್ಲಿ ವಿಡಿಯೋದಲ್ಲಿ ಗಂಭೀರ್ ಅವರು ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದರು.
58 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಗಂಭೀರ್ 4154 ರನ್ ದಾಖಲಿಸಿದ್ದಾರೆ. 147 ಏಕದಿನ ಪಂದ್ಯಗಳಲ್ಲಿ 5238ರನ್ ಬಾರಿಸಿದ್ದಾರೆ. 37 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ಐಪಿಎಲ್ ನಲ್ಲಿ ಕೊಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮುನಡೆಸಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸಾರಥ್ಯವನ್ನೂ ವಹಿಸಿದ್ದರು.

2016ರಲ್ಲಿ ಭಾರತದ ಪರ ಕೊನೆಯ ಟೆಸ್ಟ್ ಆಡಿದ್ದು, ಇಟ್ಟಿಚೆಗೆ ದೆಹಲಿ ರಣಜಿ ತಂಡದ ನಾಯಕತ್ವವನ್ನೂ ತ್ಯಜಿಸಿದ್ದರು. 15ವರ್ಷಕ್ಕೂ ಹೆಚ್ಚು ಕಾಲ ದೇಶಕ್ಕಾಗಿ ಆಡಿದ ಬಳಿಕ ಕ್ರಿಕೆಟ್ ನಿಂದ ನಿವೃತ್ತಿಗೊಳ್ಳುತ್ತಿದ್ದೇನೆ ಎಂದು ಗಂಭೀರ್ ತಮ್ಮ ವಿಡೀಯೋ ಸಂದೇಶದಲ್ಲಿ ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ