ಜನವರಿ 20: ಬ್ರಹ್ಮಾವರದಲ್ಲಿ "ಬಿ ಹೆಲ್ತಿ" ಮ್ಯಾರಥಾನ್ 2019

ಕರಾವಳಿ ಕರ್ನಾಟಕ ವರದಿ

ಬ್ರಹ್ಮಾವರ
: ಈಗಾಗಲೇ ಹಲವಾರು ಕ್ರೀಡಾ ಸೆಮಿನಾರ್ ಹಾಗೂ ಪಂದ್ಯಾಟಗಳನ್ನು ಆಯೋಜಿಸಿರುವ ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್  ಆರೋಗ್ಯದ ಬಗ್ಗೆ ಜನ ಜಾಗ್ರತಿ ಮೂಡಿಸುವ ಸಲುವಾಗಿ ರಾಷ್ಟ್ರ ಮಟ್ಟದ "ಬಿ ಹೆಲ್ತಿ" ಎಂಬ ಹಾಫ್ ಮ್ಯಾರಥಾನ್ ಅನ್ನು ಬ್ರಹ್ಮಾವರದಲ್ಲಿ ಆಯೋಜಿಸಲು  ನಿರ್ಧರಿಸಿದೆ.

ಜನರ ಫಿಟ್‌ನೆಸ್‌ಗಾಗಿ ಹಲವಾರು ತಜ್ಞರಿಂದ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಕಲ್ಯಾಣಿ ಸ್ಪೋರ್ಟ್ಸ್ ಜಂಟಿ ಆಶ್ರಯದಲ್ಲಿ "ಬಿ ಹೆಲ್ತಿ" ನಡೆಯಲಿದೆ. ಬ್ರಹ್ಮಾವರ ಸಿಟಿ ಸೆಂಟರ್ ಮತ್ತು ಮಹೇಶ್ ಆಸ್ಪತ್ರೆ ಎದುರಿರುವ ಹಾಗೂ ಆಶ್ರಯ ಸಭಾಂಗಣದ ಪಕ್ಕದಲ್ಲಿರುವ
ವ್ಯಾಲೆಂಟೈನ್ ಮೈದಾನದಿಂದ ಮ್ಯಾರಥಾನ್ ಆರಂಭಗೊಳ್ಳಲಿದೆ.

ಈ ಮ್ಯಾರಥಾನ್ ಅನ್ನು  ಜನವರಿ 20 2019ರಂದು ಆಯೋಜಿಸಲು ನಿರ್ಧರಿಸಿದ್ದು, ಪುರುಷರು 10 ಕಿಮೀ  ಹಾಗೂ ಮಹಿಳೆಯರು 6  ಕಿಮೀ ಓಟವನ್ನು  ಕ್ರಮಿಸಬೇಕಾಗಿದೆ. ಸುಮಾರು 3000 ಕ್ಕಿಂತ ಹೆಚ್ಚು ಓಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪುರುಷರು ಹಾಗೂ ಮಹಿಳೆಯರು ಎಂಬ 2 ವಿಭಾಗಗಳಲ್ಲಿ ಈ ಮ್ಯಾರಥಾನ್ ನಡೆಯಲಿದೆ.

 ಪ್ರತಿ ವಿಭಾಗದಲ್ಲಿ 6 ವಿಜೇತರನ್ನು ಗುರುತಿಸಲಾಗುವುದು. ಟ್ರೋಫಿ, ಮೆಡಲ್ಸ್, ಪ್ರಮಾಣ ಪತ್ರದ ಜೊತೆಗೆ ನಗದು ಬಹುಮಾನವನ್ನು ಕೊಟ್ಟು ವಿಜೇತರನ್ನು ಗೌರವಿಸಲಾಗುವುದು. ಈಗಾಗಲೇ ನೋಂದಣಿ ಅಭಿಯಾನ ಪ್ರಾರಂಭಗೊಂಡಿದ್ದು, ಜನವರಿ 5 ರಂದು ನೊಂದಣಿ ಅಭಿಯಾನಕ್ಕೆ ಕಡೆಯ ದಿನವಾಗಿದೆ. ಭಾಗವಹಿಸುವ ಓಟಗಾರರಿಗೆ ಟಿ- ಶರ್ಟ್, ಕ್ಯಾಪ್, ಜ್ಯೂಸ್ ಹಾಗೂ ಟಿಫನ್ ನೀಡಲಾಗುವುದು.   

ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜಿನ ದೈಹಿಕ ನಿರ್ದೇಶಕರಾದ ಸತ್ಯನಾರಾಯಣ ಹಾಗೂ  ಕ್ರಿಕೆಟ್ ಕೋಚ್ ಅಗಿರುವ ವಿಜಯ ಆಳ್ವ, ಸಮಾಜ ಸೇವಕರಾದ ಅಮೃತ್ ಶೆಣೈರವರ ಮಾರ್ಗದರ್ಶನ ಹಾಗೂ ಸಲಹೆಗಳೊಂದಿಗೆ ಮ್ಯಾರಥಾನ್ ಸಜ್ಜಾಗುತ್ತಿದೆ.  ಹಲವಾರು ಸಂಘ ಸಂಸ್ಥೆಗಳು ಕೈ ಜೊಡಿಸಲು ಮುಂದಾಗಿದ್ದಾರೆ.

ಜಿಲ್ಲಾಧಿಕಾರಿ ಶೀಮತಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ಎಸ್.ಪಿ ಲಕ್ಷಣ ನಿಂಬರ್ಗಿ, ಬ್ರಹ್ಮಾವರ ಠಾಣೆ ಯ ಸಬ್ ಇನ್ಸ್‌ಪೆಕ್ಟರ್  ರಾಘವೇಂದ್ರ ಕಾರ್ಯಕ್ರಮಕ್ಕೆ ಸಂಪೂರ್ಣ ಸಾಥ್ ನೀಡುವ ಭರವಸೆ ನೀಡಿದ್ದು, ಶುಭ ಹಾರೈಸಿದ್ದಾರೆ. ಬಾರ್ಕೂರ್ ನ್ಯಾಷನಲ್ ಕಾಲೇಜಿನ ಜಯಭಾರತಿ, ಬ್ರಹ್ಮಾವರ ಬೋರ್ಡ್ ಶಾಲೆಯ ಮಂಜುನಾಥ್, ತಿಲಕ್ ಪೂಜಾರಿ, ಸಿಪ್ರಿಯಾನ್, ಆಜಾದ್, ಗಣೇಶ್ ಅವರ ಜೊತೆಗೂಡಿ ಸುಮಾರು  50  ಕ್ಕಿಂತ ಹೆಚ್ಚು ದೈಹಿಕ ಶಿಕ್ಷಕರು ಈ ಕಾರ್ಯಕ್ರಮದ ಆಫೀಸರ್ಸ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕ್ರೀಡೆ  ಮತ್ತು ಇನ್ನಿತರ ಕ್ಷೇತ್ರಗಳ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ಸಾಧ್ಯತೆಯು ಸಹ ‌ಇದೆ ಎಂದು ಸಂಸ್ಥೆಯ ಸಂಸ್ಥಾಪಕರು ಆದ ಖಲೀಲ್‌.ಕೆರಾಡಿ 'ಕರಾವಳಿ ಕರ್ನಾಟಕ'ಕ್ಕೆ ತಿಳಿಸಿದ್ದಾರೆ. ಸಹ ಸಂಸ್ಥಾಪಕರು ಆಗಿರುವ ಪ್ರಶಾಂತ್ ಕುಂದರ್ ಹಾಗೂ ಕಲ್ಯಾಣಿ ಸ್ಪೋರ್ಟ್ಸ್‌ನ ಸ್ಥಾಪಕರಾದ ಸುನಿಲ್ ಉಪಸ್ಥಿತರಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ