ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ
ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಜ್ಯೂನಿಯರ್ ಚೇಂಬರ್ ಇಂಟರ್‍ನ್ಯಾಷನಲ್ (ಜೆಸಿಐ) ಮಂಗಳಗಂಗೋತ್ರಿ ಕೊಣಾಜೆ ಘಟಕವು ‘ಮಂಗಳೂರು ಹಿರಿಯ ನಾಗರೀಕರ ಸಂಘ (ರಿ), ಮಂಗಳೂರು, ದ. ಕ.’ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಜಂಟಿ  ಸಹಭಾಗಿತ್ವದಲ್ಲಿ ‘ಹಿರಿಯ ನಾಗರೀಕರಿಗೆ ಗುರುತಿನ ಚೀಟಿ ನೋಂದಾವಣಿ ಹಾಗೂ ವಿತರಣೆ’ ಕಾರ್ಯಕ್ರಮವನ್ನು  ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ,  ಗ್ರಾಮಚಾವಡಿ, ಕೊಣಾಜೆ ಇಲ್ಲಿ ಆಯೋಜಿಸಿತು.  ಉದ್ಯಮಿ ಶ್ರೀಮತಿ ಸೀತಾ ಆರ್. ಪಾವಸ್ಕರ್, ಬೈಂದೂರು ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು, 

“ಹಿರಿಯ ನಾಗರೀಕರನ್ನು ಗುರುತಿಸುವ ಹಾಗೂ ಅವರಿಗೆ ಪ್ರಯೋಜನಗಳನ್ನು ತಲುಪಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ, ಇಂತಹ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜೇಸಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಸಂಸ್ಥೆಗಳನ್ನು  ಅಭಿನಂದಿಸಿ ಶುಭಕೋರಿದರು.

ಜೆಸಿಐ ಮಂಗಳಗಂಗೋತ್ರಿ ಘಟಕದ ಅಧ್ಯಕ್ಷರಾಗಿರುವ ಜೇಸಿ ಡಾ. ಪ್ರಶಾಂತ ನಾಯ್ಕ ಅವರು ಅಧ್ಯಕ್ಷೀೀಯ ಭಾಷಣದಲ್ಲಿ, “ಹಿರಿಯ ನಾಗರಿಕರು ಸಮಾಜದ  ಅತ್ಯಮೂಲ್ಯವಾದ  ಆಸ್ತಿ. ಅವರ ಜೀವನಾನುಭವಗಳು  ಕಿರಿಯರ ಉಜ್ವಲ ಭವಿಷ್ಯಕ್ಕೆ ದಾರಿದೀಪ.   ಹಿರಿಯ ನಾಗರಿಕರಿಗಾಗಿ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳಿಂದ  ಹಲವಾರು  ವಿಶೇಷ ಯೋಜನೆಗಳು ಮತ್ತು ಸವಲತ್ತುಗಳು ಇವೆ,  ಮಾಹಿತಿ ಕೊರತೆಯಿಂದಾಗಿ ಆ  ಪ್ರಯೋಜನಗಳು ಅನೇಕ ಫಲಾನುಭವಿಗಳಿಗೆ   ತಲಪುವೂದಿಲ್ಲ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರೀಕರಿಗೆ ಗುರುತಿನ ಚೀಟಿ  ವಿತರಣೆ ಹಾಗೂ ಅರಿವು ಮೂಡಿಸುವುದು ಒಂದು ಅರ್ಥಪೂರ್ಣವಾದ  ಕಾರ್ಯಕ್ರಮವಾಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಿ ಪ್ರಾಯೋಜಿತ ಉಳಿತಾಯ ಯೋಜನೆ, ಸಾರಿಗೆ, ಆರೋಗ್ಯ, ಕುಟುಂಬ ಕಲ್ಯಾಣ, ದೂರ ಸಂಪರ್ಕ, ರೈಲ್ವೇ ಇಲಾಖೆ, ವಿಮಾನಯಾನ, ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ ಯೋಜನೆ ಹೀಗೆ ಹತ್ತು ಹಲವಾರು ಪ್ರಯೋಜನೆಗಳನ್ನು ಪಡೆಯಲು ಅನುಕೂಲವಾಗುವಂತಹ  ಈ ಕಾರ್ಯಕ್ರಮ ಹೆಚ್ಚು ಹೆಚ್ಚು ಜನರಿಗೆ ತಲುಪಿಸುವಂತಹ ಕಾರ್ಯವಾಗಬೇಕು, ಈ ಹಿನ್ನೆಲೆಯಲ್ಲಿ ಜೇಸಿ ಸಂಸ್ಥೆಯು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ”. 

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಗ್ರಾಮಚಾವಡಿ, ಇದರ ಅಧ್ಯಕ್ಷರಾಗಿರುವ ಶ್ರೀ ಗಂಗಾಧರ ಪೂಜಾರಿ ಅವರು ಮಾತಾನಾಡಿ   “ಹಿರಿಯ ನಾಗರೀಕರಿಗಾಗಿ ಹಲವಾರು ಸರ್ಕಾರಿ ಪಾಯೋಜಿತ ಯೋಜನೆಗಳ ಪ್ರಯೋಜನ ಪಡೆಯಲು ಸಹಾಯಕವಾಗುವ ಇಂತಹ ಅಮೂಲ್ಯವಾದ ಕಾರ್ಯಕ್ರಮವನ್ನು  ಆಯೋಜಿಸಿರುವುದನ್ನು ಶ್ಲಾಘಿಸಿದರು.   ದೇಶದ  ಏಳಿಗೆಗೆ ಹಿರಿಯ ನಾಗರಿಕರ ಕೊಡುಗೆ ಅನನ್ಯವಾದದ್ದು, ಅವರನ್ನು ಗುರುತಿಸುವುದು ಮತ್ತು  ಗೌರವಿಸುವುದು ಸ್ವಸ್ಥ ಸಮಾಜದಲ್ಲಿ ಯುವಜನತೆಯ ಪಾತ್ರ ಬಹು ಮುಖ್ಯವಾದದ್ದು” ಎಂದರು. 

ಜೇಸಿ ಮಂಗಳಗಂಗೋತ್ರಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ, ಜೇಸಿ ಬಾದ್ ಷಾ ಸಂಬಾರತೋಟ ಪ್ರಾಸ್ತವಿಕವಾಗಿ ಮಾತಾನಾಡಿ ಸರ್ಕಾರಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಿಂದ ಹಿರಿಯ ನಾಗರೀಕರಿಗೆ ಇರುವ ಯೋಜನೆ ಮತ್ತು  ಪ್ರಯೋಜನಗಳ ಕುರಿತು ಮಾಹಿತಿಯನ್ನು ನೀಡಿದರು. ಯೋಜನಾ ನಿರ್ದೇಶಕರಾದ ಜೇಸಿ ರತ್ನಕುಮಾರ್ ಜೇಸಿ ವಾಣಿಯನ್ನು ವಾಚಿಸಿದರು.

ಕಾರ್ಯದರ್ಶಿಯವರಾದ ಜೇಸಿ ಕಮಲಾಕ್ಷ ಡಿ. ಶೆಟ್ಟಿಗಾರ್ ವಂದನಾರ್ಪಣೆಯನ್ನು ಸಲ್ಲಿಸಿದರು. ಜೆಸಿಐ ಜೊತೆ ಕಾರ್ಯದರ್ಶಿ ಹಾಗು ಸಂಯೋಜಕರಾದ  ಜೇಸಿರೇಟ್ ಗೀತಾ ಸಾಲ್ದಾನ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಸ್ಥಾಪಕ ಅಧ್ಯಕ್ಷ ಜೇಸಿ ತ್ಯಾಗಂ ಹರೇಕಳ, ಗೌರವ ಅಧ್ಯಕ್ಷರಾದ ಶ್ರೀ ಆನಂದ ಅಸೈಗೋಳಿ, ಶ್ರೀ ಹರೀಶ್ ಪೂಜಾರಿ  ಉಪಸ್ಥಿತರಿದ್ದರು. ಗ್ರಾಮದ ಹಾಗೂ ಸುತ್ತಮುತ್ತಲಿನ ಸುಮಾರು 120  ಹಿರಿಯ ನಾಗರಿಕರಿಗೆ  ಗುರುತಿನ ಚೀಟಿಯನ್ನು ವಿತರಿಸಲಾಯಿತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ