ನನ್ನ ತಂದೆ ಎಲ್ಲ ಧರ್ಮಗಳನ್ನು ಗೌರವಿಸಬೇಕು ಎಂದು ಹೇಳಿಕೊಟ್ಟಿದ್ದರು: ಹತ್ಯೆಯಾದ ಪೊಲೀಸ್ ಅಧಿಕಾರಿಯ ಪುತ್ರ

ಕರಾವಳಿ ಕರ್ನಾಟಕ ವರದಿ

ಬುಲಂದ್ ಶಹರ್:
ತನ್ನ ಮಕ್ಕಳು ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಎಂದು ನನ್ನ ತಂದೆ ಬಯಸುತ್ತಿದ್ದರು ಎಂದು ನಿನ್ನೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಸುಬೋಧ್ ಕುಮಾರ್ ಅವರ ಪುತ್ರ ಅಭಿಶೇಕ್ ಕುಮಾರ್ ಅವರು ಹೇಳಿದ್ದಾರೆ.

ನಾವು ದೇಶದ ಒಬ್ಬ ಉತ್ತಮ ನಾಗರಿಕರಾಗಬೇಕು. ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಬಾರದು. ಅದು ಹಿಂದೂ, ಮುಸ್ಲಿಮ್, ಸಿಖ್ ಯಾರೇ ಅಗಲಿ. ಇಲ್ಲ ಎಲ್ಲರೂ ಸಮಾನರು. ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುವುದನ್ನು ನಮ್ಮ ತಂದೆ ಎಂದಿಗೂ ವಿರೋಧಿಸುತ್ತಿದ್ದರು. ಆದರೆ ಇಂದು ನನ್ನ ತಂದೆ ಹಿಂದು-ಮುಸ್ಲಿಂ ಸಂಘರ್ಷದಿಂದ ನಡೆದ ಹಿಂಸೆಯಲ್ಲಿ ಮೃತರಾಗಿದ್ದಾರೆ. ನಾಳೆ ಇನ್ಯಾರ ತಂದೆ ಮೃತರಾಗುತ್ತಾರೋ ಎಂದಿದ್ದಾರೆ ಅಭಿಶೇಕ್.

ನಮ್ಮ ತಂದೆ ಒಬ್ಬ ಅತ್ಯುತ್ತಮ ನಾಗರಿಕರಾಗಿದ್ದರು. ಅವರಿಗೆ ಸಮಾಜದಲ್ಲಿ ಹಿಂಸೆ ನಡೆಯುವುದು ಎಂದಿಗೂ ಇಷ್ಟವಿರಲಿಲ್ಲ. ಆದರೆ ಆ ಹಿಂಸೆಯಿಂದಲೇ ಅವರು ಮೃತರಾಗಿದ್ದು ದುರದೃಷ್ಟಕರ. ಇಂಥ ಹಿಂಸೆಗಳಿಗೆ ಕೊನೆ ಎಂದು? ಇಂದು ನನ್ನ ತಂದೆ ಮೃತರಾದರು, ನಾಳೆ ಯಾರ ತಂದೆಯೋ?" ಎಂದು ಅಭಿಷೇಕ್ ಭಾವುಕರಾಗಿ ಹೇಳಿದರು.

ಅಭಿಶೇಕ್ ಕುಮಾರ್ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ತಂದೆ ಸಾಯುವ ಒಂದು ದಿನದ ಹಿಂದೆ, ವೀಕ್ ಇರುವ ವಿಷಗಳ ಕಡೆ ಹೆಚ್ಚು ಗಮನ ಕೊಡು ಎಂದು ಹೇಳಿದ್ದರು ಎಂದರು.

ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಸೋಮವಾರ ನಡೆಯುತ್ತಿದ್ದ ಪ್ರತಿಭಟನೆಯೇ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಆರಂಭವಾದ ಕೋಮು ಸಂಘರ್ಷವನ್ನು ತಡೆಯಲು ಮುಂದಾದ ಸುಬೋಧ್ ಕುಮಾರ್ ಸಿಂಗ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ