ವಿಜ್ರಂಭಣೆಯಿಂದ ಸಮಾರೋಪಗೊಂಡ ಮೀಲಾದ್ ಫೆಸ್ಟ್ 2018

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ನಂದರಬೆಟ್ಟು ಸ್ಫೋರ್ಟ್ಸ್ & ಕಲ್ಚರಲ್ ಕ್ಲಬ್ ಮತ್ತು ಇರ್ಫಾದುಲ್ ಮಸಾಕೀನ್ ವೆಲ್ಫೇರ್ ಅಸೋಸಿಯೇಷನ್   ಇದರ ಜಂಟಿ ಆಶ್ರಯದಲ್ಲಿ ಮೀಲಾದುನ್ನಬಿ ಕಾರ್ಯಕ್ರಮದ ಪ್ರಯುಕ್ತ  ಆಯೋಜಿಸಿದ್ದ ಮೀಲಾದ್ ಫೆಸ್ಟ್ 2018 ನಂದರಬೆಟ್ಟು ಇಲ್ಲಿನ ಮರ್ಹೂಮ್ ಮುಹಮ್ಮದ್ ಉವೈಸ್ ವೇದಿಕೆಯಲ್ಲಿ  ಸಮಾರೋಪಗೊಂಡಿದೆ.

ಈ ಪ್ರಯುಕ್ತ ಆಯ್ದ 9 ತಂಡಗಳ ಹೊನಲು ಬೆಳಕಿನ  ದಫ್ ಸ್ಪರ್ಧೆ, ಪ್ರತಿಭಾ ಕಾರ್ಯಕ್ರಮ, ಮೌಲಿದ್ ಪಾರಾಯಣ, ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದಫ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಹಯಾತುಲ್ ಇಸ್ಲಾಂ ಧಪ್ಪ್ ತಂಡ ಪರ್ಲಡ್ಕ, ದ್ವಿತೀಯ ಬಹುಮಾನವನ್ನು ರಿಫಾಯಿಯ ದಫ್ ತಂಡ ಕೈಕಂಬ ಬಿ.ಸಿ ರೋಡ್, ತೃತೀಯ ಬಹುಮಾನವನ್ನು ಅಲ್  ಅಮೀನ್  ದಫ್ಫ್ ತಂಡ ಶಿರ್ವ ಗೆದ್ದುಕೊಂಡಿವೆ.

ಮದೀನಾ ಮಸ್ಜೀದ್ ನಂದರಬೆಟ್ಟು ಇದರ ಇಮಾಮ್  ಇಸ್ಮಾಯಿಲ್  ಮದನಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಿತ್ತಬೈಲ್ ಮಸೀದಿಯ ಖತೀಬರಾದ ಎಂ ವೈ ಅಶ್ರಫ್ ಫೈಝಿ ಉಸ್ತಾದ್  ಕೊಡಗು ರವರು ದುವಾ ಆಶೀರ್ವಚನ ನೀಡಿದರು.

ಅರಫಾ ಜುಮಾ ಮಸ್ಜಿದ್ ಪರ್ಲಿಯ ಇದರ ಖತೀಬರಾದ ಅಬ್ದುಲ್ ಖಾದರ್ ಅಷಾಫಿ ಆಶಯ ಭಾಷಣ ಮಾಡಿ, ತುಂಬೆ  ಜುಮಾ ಮಸೀದಿಯ ಇಮಾಮ್  ಅಬ್ದುಲ್ ಲತೀಫ್ ಫೈಝಿ ದುವಾ ನೆರವೇರಿಸಿದರು.

ಮುಖ್ಯ ಅತಿಥಿಗಳಿಗಾಗಿಬಂಟ್ವಾಳ ಪುರಸಭೆಯ ಸ್ಥಳೀಯ ಜನಪ್ರತಿನಿಧಿಗಳಾದ
ಎನ್ ಮಹಮ್ಮದ್,ಲುಕ್ಮಾನ್, ಮೊಹಮ್ಮದ್ ಶರೀಫ್, ಹಸೈನಾರ್, ಮಸೀದಿ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಮಹಮ್ಮದ್ ಸಾಗರ್, ಫಲುಲ್ ತಂಗಲ್, ಇಬ್ರಾಹಿಂ ಬೋಗಡಿ, ಇಕ್ಬಾಲ್ ನಂದರಬೆಟ್ಟು, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರುಗಳಾದ ಹಮೀದ್ ಪಲ್ಲ (NMS), ಮನ್ಸೂರ್  ಮಜಲ್ (ಯಂಗ್ ಮೆನ್ಸ್ ), ಬಶೀರ್ ವಿಟ್ಲ, (ನೂರಾನೀಯ), ರಿಯಾಝ್ ಜವಾನ್ (ಜವಾನ್ ಫ್ರೆಂಡ್ಸ್) ಲತೀಫ್ ಲತ್ತಿ (ಮೀಲಾದ್ ಗ್ರೂಪ್), ಲತೀಫ್  ನೆರಳಕಟ್ಟೆ (ದಫ್ ಅಸೋಸಿಯೇಷನ್) ಇವರುಗಳು ಭಾಗವಹಿಸಿದ್ದರು.

ವೇದಿಕೆಯಲ್ಲಿ ಇರ್ಫಾದುಲ್ ಮಸಾಕೀನ್ ಇದರ ಅಧ್ಯಕ್ಷರಾದ  ಸಮದ್ ಎಸ್.ಎ, ನಿಕಟ ಪೂರ್ವ ಅಧ್ಯಕ್ಷರಾದ ಶರೀಫ್ ಕಂಟ್ರಾಕ್ಟರ್, ಮದರಸದ ಉಸ್ತಾದರುಗಳಾದ ಶರೀಫ್ ದಾರಿಮಿ, ಅಬ್ಬಾಸ್ ಮುಸ್ಲಿಯಾರ್ , ಸ್ಥಳೀಯ ಮುಖಂಡರಾದ,  ಇಕ್ಬಾಲ್ ಮೈನ್ಸ್,ರಜಾಕ್ ಎಸ್.ಎ. ಅಹ್ಮದ್ ಕುಂಞಿ, ಅಶ್ರಫ್ ಜಿ.ಕೆ ಮೊದಲಾದವರು ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಇರ್ಫಾದುಲ್ ಮಸಾಕೀನ್ ಇದರ ಮಹಮ್ಮದ್ ಪಿಕಪ್, ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು NSCC ಅಧ್ಯಕ್ಷರಾದ ನಿಝಾಮ್ ನಂದರಬೆಟ್ಟು ರವರು ವಹಿಸಿದ್ದರು.

ಸಿದ್ದೀಕ್ ಇನ್ಪೋಮೇಟ್, ಅತಿಥಿಗಳನ್ನು ಸ್ವಾಗತಿಸಿ, ಆರಿಫ್ ರವರು ದಫ್ ಸ್ಪರ್ಧೆಯನ್ನು ನಡೆಸಿಕೊಟ್ಟರು, ಸಗೀರ್ ಅಹ್ಮದ್ ಮತ್ತು ಇಷಾನ್ ರವರು ಕಾರ್ಯಕ್ರಮದ ಉಸ್ತುವಾರಿಯಾಗಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ