ಭಾರತ ನನ್ನ ತಂದೆ ಜನಿಸಿದ ದೇಶ, ಇಲ್ಲಿಂದ ನನ್ನನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ: ಓವೈಸಿ

ಕರಾವಳಿ ಕರ್ನಾಟಕ ವರದಿ

ಹೈದರಾಬಾದ್:
ಭಾರತ ನನ್ನ ತಂದೆ ಜನಿಸಿದ ದೇಶವಾಗಿದ್ದು, ಇಲ್ಲಿಂದ ನನ್ನನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು ಭಾನುವಾರ ಹೇಳಿದ್ದಾರೆ.

ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಓವೈಸಿ ಓಡಿ ಹೋಗಬೇಕು ಎಂದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ರ್ಯಾಲಿಯೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಓವೈಸಿ, ಭಾರತ ನನ್ನ ತಂದೆಯ ಜನಿಸಿದ ದೇಶವಾಗಿದ್ದು, ಇಲ್ಲಿಂದ ನನ್ನನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರವಾದಿ ಆ್ಯಡಂ ಅವರು ಪ್ರಾಡೈಸ್ನಿಂದ ಭೂಮಿಗೆ ಇಳಿದಾಗ ಭಾರತಕ್ಕೆ ಬಂದಿದ್ದಾರೆಂಬುದು ನನ್ನ ಧಾರ್ಮಿಕ ನಂಬಿಕೆಯಾಗಿದೆ. ಅಲ್ಲದೆ, ಭಾರತದ ನನ್ನ ತಂದೆ ಹುಟ್ಟಿದ ರಾಷ್ಟ್ರ. ಇಲ್ಲಿಂದ ನನ್ನನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಹೈದರಾಬಾದ್ ನಿಂದ ನಿಜಾಮ ಓಡಿಹೋಗಿರಲಿಲ್ಲ. ಇತಿಹಾಸದ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿಗಳು ಅಜ್ಞಾನವನ್ನು ಹೊಂದಿದ್ದಾರೆ.

ನಿಜಾಮ ಮಿರ್ ಒಸ್ಮನ್ ಅಲಿ ಖಾನ್ ಅವರು ಹೈದರಾಬಾದ್ ನಿಂದ ಓಡಿಹೋಗಿರಲಿಲ್ಲ. ಅವರನ್ನು ರಾಜ ಪ್ರಮುಖರನ್ನಾಗಿ ಮಾಡಲಾಗಿತ್ತು. ಈ ವೇಳೆ ಚೀನಾದೊಂದಿಗೆ ಯುದ್ಧ ಕೂಡ ಸಾಗುತ್ತಿತ್ತು. ಈ ವೇಳೆ ಭಾರತಕ್ಕೆ ಚಿನ್ನವನ್ನೂ ನೀಡಿದ್ದ. ಬಿಜೆಪಿಯವರ ಬೆದರಿಗೆ ಹಾಗೂ ಪ್ರಚಾರಗಳಿಗೆ ನಾನು ಹೆದರುವುದಿಲ್ಲ. ಇದು ಕೇವಲ ಯೋಗಿ ಭಾಷಣವಷ್ಟೇ. ಭಾಷೆ ಹಾಗೂ ಆಲೋಚನೆಯೆಲ್ಲವೂ ಪ್ರಧಾನಿ ಮೋದಿಯವರದ್ದು. ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಗಳಂತೆ ಮಾತನಾಡಬೇಕು. ತಮ್ಮ ಸ್ಥಾನಕ್ಕೆ ಗೌರವವನ್ನು ನೀಡಬೇಕೆಂದು ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ 150 ಮಕ್ಕಳು ಮಿದುಳು ಉರಿಯೂತದಿಂದ ಸಾವನ್ನಪ್ಪಿದ್ದು, ಯೋಗಿ ಅವರು ಮೊದಲು ತಮ್ಮ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಲಿ ಎಂದಿದ್ದಾರೆ.

ಬಳಿಕ ಓವೈಸಿ ಸಹೋದರ ಮಾತನಾಡಿ ಯೋಗಿ ಆದಿತ್ಯನಾಥ್ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಓಡಿ ಹೋಗುವ ವ್ಯಕ್ತಿಗಳು ನಾವಲ್ಲ. ನಮ್ಮ 1,000 ಪೀಳಿಗೆ ಇಲ್ಲಿಯೇ ಜೀವನ ನಡೆಸಲಿದೆ ಎಂದು ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ