ಮಣಿಪಾಲ: ವಾಕಿಂಗ್ ಹೋಗಿದ್ದ ವ್ಯಕ್ತಿಯ ದರೋಡೆ
ಮಣಿಪಾಲ: ವಾಕಿಂಗ್ ಹೋಗಿದ್ದ ವ್ಯಕ್ತಿಯ ದರೋಡೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಇಂದು ಬೆಳಗಿನ ಜಾವ ನಾಲ್ಕುವರೆ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೋರ್ವರನ್ನು ಆರು ಮಂದಿ ದರೋಡೆಕೋರರ ತಂಡವೊಂದು ಕಾರಿನಲ್ಲಿ ಅಪಹರಿಸಿ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಮಣಿಪಾಲ ಲಕ್ಷೀಂದ್ರನಗರ ಎಂಬಲ್ಲಿ ನಡೆದಿದೆ.

ಲಕ್ಷ್ಮೀಂದ್ರನಗರದ ವಿಜಯ ಕುಮಾರ್ ಎ.ಎಸ್(65) ಎಂಬವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ವಿಜಯ್ ಕುಮಾರ್ ಅವರು ಎಂಜಿಎಂ ಕಾಲೇಜು ಕಡೆಯಿಂದ ಲಕ್ಷ್ಮೀಂದ್ರನಗರದ ಬಳಿ ಸುಧಾ ಫರ್ನೀಚರ್ ಬಳಿ ಹೋಗುತ್ತಿರುವ ಸಂದರ್ಭ ಉಡುಪಿಯಿಂದ ಆಮ್ನಿ ಕಾರಿನಲ್ಲಿ ಬಂದ ಕಾರು ಅವರ ಬಳಿ ನಿಂತಿದ್ದ ಅದರಲ್ಲಿದ್ದ ಓರ್ವ ವಿಜಯ್ ಅವರನ್ನು ಕಾರಿನಲ್ಲಿ ಎಳೆದು ಹಾಕಿದ್ದ ಎನ್ನಲಾಗಿದೆ.

ಕಾರಿನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಏಳು ಮಂದಿ ಇದ್ದು, ವಿಜಯ್ ಅವರ ಕಣ್ಣಿಗೆ, ಬಾಯಿಗೆ, ಕೈಗೆ ಟೇಪ್ ಅಂಟಿಸಿ ಹಲ್ಲೆಗೈದು ಅವರ ಪ್ಯಾಂಟ್ ಕಿಸೆಯಲ್ಲಿದ್ದ ಹಣ 120ರೂ.ಮತ್ತು ಬೆರಳುಗಳಲ್ಲಿದ್ದ ಐವತ್ತು ಸಾವಿರ ರೂ. ಮೌಲ್ಯದ ಎರಡು ಚಿನ್ನದ ಉಂಗುರ ಕಸಿದುಕೊಂಡಿದ್ದರು. ಉಡುಪಿ ಕಿನ್ನಿಮೂಲ್ಕಿ ಬಳಿ ವಿಜಯ್ ಅವರನ್ನು ಕಾರಿನಿಂದ ತಳ್ಳಿ ಪರಾರಿಯಾಗಿದ್ದಾರೆ.

ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ