ಉಡುಪಿ: ಮಧ್ವ ಸರೋವರದಲ್ಲಿ ಮುಳುಗಿ ಯಾತ್ರಾರ್ಥಿ ಸಾವು
ಉಡುಪಿ: ಮಧ್ವ ಸರೋವರದಲ್ಲಿ ಮುಳುಗಿ ಯಾತ್ರಾರ್ಥಿ ಸಾವು

ಕರಾವಳಿ ಕರ್ನಾಟಕ ವರದಿ

ಉಡುಪಿ
: ಕೃಷ್ಣ ಮಠದ ಮಧ್ವ ಸರೋವರದಲ್ಲಿ ಮುಳುಗಿ ಯಾತ್ರಾರ್ಥಿಯೋರ್ವರು ಸಾವಪ್ಪಿದ ಕಳವಳಕಾರಿ ಘಟನೆ ಮುಂಜಾನೆ 5:30ಸುಮಾರಿಗೆ ನಡೆದಿದೆ.

ಶಿವಮೊಗ್ಗ ವಿದ್ಯಾನಗರದ ಆದರ್ಶ(35) ಎಂದು ಮೃತರನ್ನು ಗುರುತಿಸಲಾಗಿದೆ.
ಮಧ್ವ ಸರೋವರದಲ್ಲಿ ಸ್ನಾನಕ್ಕಿಳಿದ ಸಂದರ್ಭ ಆದರ್ಶ ಅವರು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಗ್ನಿಶಾಮಕ ದಳ ಮತ್ತು ಮುಳುಗು ತಜ್ನ ಅರುಣ ಕುಮಾರ್ ದೆಂದೂರುಕಟ್ಟೆಯವರು ಮೃತ ದೇಹದ ಪತ್ತೆಗಾಗಿ ಶ್ರಮಿಸಿದ್ದು, ಅರುಣ್ ಅವರು ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.

ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆದರ್ಶ ಅವರು ವಸತಿಗೃಹದಲ್ಲಿ ತಂಗಿದ್ದಾಗ ವಿದ್ಯಾನಗರ, 4ನೇ ಎ ಕ್ರಾಸ್, ಶಿವಮೊಗ್ಗ ಎಂಬ ವಿಳಾಸ ನೀಡಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ