ಪತ್ರಕರ್ತ ಚಂದ್ರ ಕೆ ಹೆಮ್ಮಾಡಿಯ ವಿರುದ್ಧ ಮತ್ತೆ 11 ಬಾಲಕರಿಂದ ಲೈಂಗಿಕ ದೌರ್ಜನ್ಯ ದೂರು!

ಮಝರ್ ಕುಂದಾಪುರ/ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಬಾಲಕನ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಜೈಲುಪಾಲಾಗಿರುವ ಪತ್ರಕರ್ತ ಚಂದ್ರ ಹೆಮ್ಮಾಡಿಯ ಸಲಿಂಗಕಾಮದ ತೆವಲು ಹೇಗಿತ್ತೆಂದರೆ ತನಿಖೆ ನಡೆಸುತ್ತಿರುವ  ಇಡೀ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯೇ ಬೆಕ್ಕಸ ಬೆರಗಾಗಿ ಹೋಗಿದೆ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಇದೀಗ ಮತ್ತೆ ಹನ್ನೊಂದು ಪ್ರಕರಣಗಳು  ಸಾಲುಸಾಲಾಗಿ ಈ ಹಿಂಸ್ರ ಪಶುವಿನ ಮೇಲೆ ದಾಖಲಾಗಿ ಹೋಗಿವೆ. ಇನ್ನೂ ಲೆಕ್ಕಕ್ಕೆ  ಸಿಗದೇ ಇರಬಹುದಾದ ಪ್ರಕರಣಗಳು ಏಷ್ಟೋ ಹಾಗಂತ ತನಿಖಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆರಂಭದಲ್ಲಿ ಉದಯವಾಣಿ, ನಂತರ ವಿಜಯ ಕರ್ನಾಟಕದ ಬಿಡಿ ವರದಿಗಾರನಾಗಿ ಸಮಾಜದ ಮುನ್ನಲೆಗೆ ಬಂದ ಚಂದ್ರ ಹೆಮ್ಮಾಡಿ ಆಕಾಶವಾಣಿ ಗಾಯಕನಾಗಿಯೂ, ಸ್ಥಳೀಯವಾಗಿ ಈ ಹಿಂದೆ ವಂಡ್ಸೆಯಲ್ಲಿ ನಡೆದ ಸಾಹಿತ್ಯ ಪರಿಷತ್ ಸಭೆಯ ಅಧಕ್ಷನಾಗಿಯೂ ಗುರ್ತಿಸಲ್ಪಟ್ಟಿದ್ದ. ಉದಯವಾಣಿಯಿಂದ ಗೇಟ್ ಪಾಸ್ ಪಡೆದವನು ಮತ್ತೆ ಸೇರಿಕೊಂಡಿದ್ದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ. ಯಾವಾಗ ವಿಜಯ ಕರ್ನಾಟಕದ ಲೇಬಲ್ ಇವನ ಹಣೆಗೆ ಅಂಟಿಕೊಂಡಿತ್ತೋ ಖುಲ್ಲಂ ಖುಲ್ಲಾ ಎಂಬಂತೆ ಸುದ್ದಿಗಿಷ್ಟು ಕಾಂಚಾಣ ಪಡೆಯುವುದು ಇವನ ದಿನಚರಿಯಾಗಿತ್ತೆನ್ನಲಾಗಿದೆ. ಅದರ ಜತೆಗೆ ಶುದ್ಧ  ಬ್ಲಾಕ್ ಮೇಲ್  ಗೆ ಇಳಿದ ಇವನ ಆಡಿಯೋ ಕ್ಲಿಪ್‍ಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಹೋಗಿದ್ದವು. ಅಷ್ಟಾದರೂ ಇವನು ಏಲ್ಲೋ ಕ್ಷಮೆಗೆ ಅರ್ಹ ನಾಗುತ್ತಿದ್ದನೋ ಏನೋ ? ಆದರೆ ಇನ್ನೂ ಲೋಕವನ್ನೇ ಬೆರಗು ಕಂಗಳಿಂದ ದಿಟ್ಟಿಸುತ್ತಿರುವ ಮುಗ್ಧ ಮಕ್ಕಳ ಮೇಲೆ ಇವನು ಏರಗಿದ ಪರಿ ಇದೆಯಲ್ಲಾ ಅದಕ್ಕೇನೆನ್ನ ಬೇಕು ? ಅದಾಗಲೇ ಮದುವೆಯಾಗಿ ಪುಟ್ಟ ಮಗುವನ್ನು ಹೊಂದಿರುವ ಈತನಿಗೆ ಕಟ್ಟ ಕಡೆಗೆ ತನ್ನ ಮಗುವಿನ ನೆನಪೂ ಕಾಡಲಿಲ್ಲವಾ? ಇವನೊಳಗೆ ಅಡಗಿದ್ದ ಸಲಿಂಗ ಕಾಮಿ ಅಷ್ಟೊಂದು ಘನಘೋರವಾಗಿ ಗರ್ಜಿಸುತ್ತಿದ್ದನಾ ಎಂಬ ಪ್ರಶ್ನೆಗಳು ಈಗ ಕಾಡತೊಡಗಿವೆ.

ಕೇಳಿ ಬರುವ ಹಾಗೆ ಹಲವು ವರ್ಷಗಳಿಂದಲೂ ಗಿಡುಗ ಸದ್ದಿಲ್ಲದೆ ಗುಬ್ಬಿ ಮರಿಗಳ ಮೇಲೆ ಏರಗುವಂತೆ ಅದೆಷ್ಟೋ ಮುಗ್ಧ ಬಾಲಕರನ್ನು ಈ ಪಾತಕಿ ತನ್ನ ವಿಕೃತಿಗೆ ಬಳಸಿಕೊಳ್ಳುತ್ತಲೇ ಬಂದಿದ್ದಾನೆ. ಅಲ್ಲೊಂದು ಇಲ್ಲೊಂಧು ಅಪಸ್ವರವೆದ್ದರೂ ಅದನ್ನು ತನ್ನ ಪ್ರಭಾವ ಬೆದರಿಕೆಗಳಿಂದ ನವಿರಾಗಿ ಹ್ಯಾಂಡಲ್ ಮಾಡಿದ್ದಾನೆ. ಅದರೆ ಪಾಪದ ಕೊಡ ಚೆಲ್ಲುವಷ್ಟು ತುಂಬಿ ಬಿಟ್ಟಿದೆ. ದಾರಿ ತೋರಿಸುವ ನೆಪದಲ್ಲಿ ಖುದ್ದು ಮನೆಯವರೇ ಕಳುಹಿಸಿಕೊಟ್ಟ ಮುಗ್ಧ ಬಾಲಕನನ್ನು ಪೈಶಾಚಿಕ ರೀತಿಯಲ್ಲಿ ಭೋಗಿಸಿ ಕೊನೆಗೂ ಅಲಿಖಿತ ಕಾನೂನಿನಂತೆ ಸಲಿಂಗಿಗಳ ಅಡ್ಡೆಯಾಗಿರುವ ಸೆರೆಮನೆಯನ್ನು ಸೇರಿ ಬಿಟ್ಟಿದ್ದಾನೆ.

ಪೊಲೀಸರ ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಾಧೀಶರು ಮೂರು ದಿನಗಳ ವರೆಗೆ ಚಂದ್ರ ಹೆಮ್ಮಾಡಿಯನ್ನು ಪೊಲೀಸ್ ಕಸ್ಟಡಿ ನೀಡಿದ್ದಾರೆನ್ನಲಾಗಿದೆ.ಕಪ್ಪಾರು, ಆಲೂರು, ಹೆಮ್ಮಾಡಿ ಪರಿಸರ ಸೇರಿ ಸರಿಸುಮಾರು ಹನ್ನೊಂದು ಬಾಲಕರ ಮೇಲೆ ಈತ ತನ್ನ ವಿಕೃತಿಯನ್ನು ಮೆರೆದಿರುವ ಬಗ್ಗೆ  ಬೈಂದೂರು ಠಾಣೆಯಲ್ಲಿ ಏಫ್‍ಐಆರ್ ದಾಖಲಾಗಿದೆ. ಚಂದ್ರ ಕೆ.ಹೆಮ್ಮಾಡಿಯ ಈ ನೀಚ ಕೃತ್ಯಕ್ಕೆ ಸ್ಥಳೀಯ ಪತ್ರಕರ್ತರ ಗಢಣ ಥಂಢಾ ಹೊಡೆದು ಬಿಟ್ಟಿರುವುದು ಸುಳ್ಳಲ್ಲ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ