ಪ್ರೇಮ, ಪ್ರಣಯ, ಮತ್ಸರ: ಕುಂದಾಪುರ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಚೂರಿ ಇರಿತ
ಪ್ರೇಮ, ಪ್ರಣಯ, ಮತ್ಸರ: ಕುಂದಾಪುರ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಚೂರಿ ಇರಿತ

ಮಝರ್ ಕುಂದಾಪುರ/ಕರಾವಳಿ ಕರ್ನಾಟಕ ವರದಿ

ಕುಂದಾಪುರ :
ಕೆಲವೇ ದಿನಗಳ  ಶಾಲಾ ವಿದ್ಯಾರ್ಥಿನಿಗಳ ಎದುರು ಹೀರೊಗಿರಿ ತೋರಿಸುತ್ತಾ  ರೌಡಿಸಿಯಂ ಮೆರೆಯುತ್ತಿದ್ದ ಮಂಜುನಾಥನೆಂಬ ಐಟಿಐ ವಿದ್ಯಾರ್ಥಿಯನ್ನು  ಮುಖ್ಯ ಬೀದಿಯಲ್ಲಿಯೇ ಅಟ್ಟಾಡಿಸಿ ಹೊಡೆದ ರೌಡಿಸಂನ ಮತ್ತೊಂದು ಅಧ್ಯಾಯವಾಗಿ  ಇಂದು ಕುಂದಾಪುರ ಜೂನಿಯರ್ ಕಾಲೇಜು ವಿದ್ಯಾರ್ಥಿಯೋರ್ವನ ಮೇಲೆ ಕಾಲೇಜ್ ಕ್ಯಾಂಪಸ್‍ನಲ್ಲೇ ಚೂರಿಯಿಂದ ಅಟ್ಯಾಕ್ ಮಾಡಲಾಗಿದೆ. ಕಾಲೇಜಿನ ಪಿಯು  ವಿದ್ಯಾರ್ಥಿಯೊಬ್ಬನಿಗೆ ಇದೀಗ ಮಿನಿ ರೌಡಿಯ ಪಟ್ಟ ಪಡೆದಿರುವ ಅದೇ ಕಾಲೇಜಿನ ಹಳೆ ವಿದ್ಯಾರ್ಥಿ ಯೋರ್ವ ನಾಲ್ಕು ಐದು ಕಡೆ  ಚೂರಿಯಿಂದ  ಇರಿದು ಪರಾರಿಯಾಗಿದ್ದಾನೆ.

ಕುಂದಾಪುರ ಜೂನಿಯರ್ ಕಾಲೇಜಿನ ದ್ವಿತೀಯ ಆಟ್ರ್ಸ್ ವಿಭಾಗದ ವಿದ್ಯಾರ್ಥಿ ಉಪ್ಪಿನಕುದ್ರು ಮೂಲದ ಅನುಪ್ ಶೇರಿಗಾರ್(17) ಎಂಬಾತನೇ ಚೂರಿ ಇರಿತಕ್ಕೊಳಗಗಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ವಿಶೇಷವೆಂದರೆ ಇದೇವಿದ್ಯಾರ್ಥಿ ಮೊನ್ನೆ ಐಟಿಐ ವಿದ್ಯಾರ್ಥಿಗೆ ಅಟ್ಟಾಡಿಸಿ ಹೊಡೆದ ಪ್ರಕರಣದಲ್ಲಿ ಮುಖ್ಯ ಪಾತ್ರ ವಹಿಸಿದ್ದನೆನ್ನಲಾಗಿದೆ.

 ಈ ನಡುವೆ ಇದೇ ಕಾಲೇಜಿನ ಪವನ್ ಎಂಬ ವಿದ್ಯಾರ್ಥಿಯ ಗುಂಪಿಗೂ ಅನೂಪನ ಗುಂಪಿಗೂ ಒಂದಷ್ಟು ವೈಮನಸ್ಸು, ದುರುಗುಟ್ಟುವಿಕೆ ಏರ್ಪಟ್ಟಿದ್ದು, ಮಾರಾಮಾರಿಗೆ ಕ್ಷಣಗಣನೆ ನಡೆಯುತ್ತಿತೆನ್ನಲಾಗಿದೆ.ಈ ಕಾರಣಕ್ಕೆ  ಅನುಪನ್ನು ಹಣಿಯಲು ಇದೇ ಕಾಲೇಜಿನ ಹಳೆ ವಿದ್ಯಾರ್ಥಿ ಮಿಥುನ್ ಅಲಿಯಾಸ್ ಯಮ ಯಾನೆ ಯಮನೂರು ಎಂಬಾತನ ಸ್ನೇಹವನ್ನು ಬಳಸಿಕೊಂಡಿದ್ದಾರೆ. ಅಪ್ಪಟ ಫಿಲ್ಮೀ ಸ್ಟೈಲಿನಲ್ಲಿ ಇಲ್ಲಿ  ಎಂಟ್ರಿ ಪಡೆದ  ಮಿಥುನ್ ನಿನ್ನೆ ಬೆಳಿಗ್ಗೆ ಕಾಲೇಜ್ ಸಮಯದಲ್ಲಿಯೇ  ಕ್ಯಾಂಪಸ್ ಗೆ ಬಂದು ಅಲ್ಲಿದ್ದ ಅನುಪನನ್ನು ನೆಲಕ್ಕೆ  ಕೆಡವಿ ಇತರ ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಕೈಯಲ್ಲಿದ್ದ ಚೂರಿಯಿಂದ ಅನುಪನ ಕುತ್ತಿಗೆ, ಎದೆ, ಹೊಟ್ಟೆ ಸೇರಿದಂತೆ ದೇಹದ ಐದು ಕಡೆಗೆ ಅನಾಮತ್ತಾಗಿ ಇರಿದು ಪರಾರಿಯಾಗಿದ್ದಾನೆ.

ಕೂಡಲೇ ಸ್ಥಳದಲ್ಲಿದ್ದ ಇತರ ವಿದ್ಯಾರ್ಥಿಗಳು ಅನುಪನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಅನುಪ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪರಾರಿಯಾದ ಆರೋಪಿ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಪಿಎಸ್‍ಐ ಹರೀಶ್ ಆರ್. ನಾಯ್ಕ್, ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ