ಶಾಲಾ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಪತ್ರಕರ್ತ ಚಂದ್ರ ಕೆ ಹೆಮ್ಮಾಡಿ ಬಂಧನ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಅತ್ಯಂತ ಹೇಯ ಪ್ರಕರಣವೊಂದರಲ್ಲಿ ಶಾಲಾ ಬಾಲಾಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಸಲಿಂಗ ಕಾಮಿ ಪತ್ರಕರ್ತ ಚಂದ್ರ ಕೆ, ಹೆಮ್ಮಾಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

'ವಿಜಯ ಕರ್ನಾಟಕ' ದಿನ ಪತ್ರಿಕೆಯ ಹೆಮ್ಮಾಡಿ ಭಾಗದ ಬಿಡಿ ಸುದ್ದಿಗಾರನಾಗಿರುವ ಚಂದ್ರ ಕೆ ಹೆಮ್ಮಾಡಿಯ ಮೇಲೆ ಬಾಲಕರ ಮೇಲೆ ಸಲಿಂಗಕಾಮ ದೌರ್ಜನ್ಯ ನಡೆಸಿದ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.

ಬೈಂದೂರು ಸಮೀಪದ ಹಳ್ಳಿಯೊಂದರಲ್ಲಿ ಕೆಲ ಫೋಟೊಗಳನ್ನು ತೆಗೆಯಲು ಕಾಡಿಗೆ ಹೋಗಲು ನಿಮ್ಮ ಮಗನನ್ನು ಕಳುಹಿಸಿಕೊಡಿ ಎಂದು ಬಾಲಕನ ತಂದೆಯಲ್ಲಿ ಚಂದ್ರ ವಿನಂತಿಸಿದ್ದಾನೆ. ಅಂತೆಯೆ ಬಾಲಕನ ಪೋಷಕರು ಈತನೊಂದಿಗೆ ತಮ್ಮ ಮಗನನ್ನು ಕಳುಹಿಸಿಕೊಟ್ಟಿದ್ದಾರೆ. ಬಾಲಕನನ್ನು ಕಾಡಿಗೆ ಕರೆದುಕೊಂಡು ಹೋದ ಚಂದ್ರ ಆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಕೆಲ ದಿನಗಳಿಂದ ಬಾಲಕ ಖಿನ್ನತೆಗೆ ಒಳಗಾಗಿದ್ದು ಮನೆಯಲ್ಲಿ ವಿಚಾರಿಸಿದಾಗ ಬಾಲಕ ಬಾಯಿಬಿಟ್ಟಿಲ್ಲ. ಬಾಲಕನಿಗೆ ನಡೆದಾಡಲೂ ಸಹ ಕಷ್ಟವಾಗುತ್ತಿತ್ತು ಎನ್ನಲಾಗಿದೆ. ಖಿನ್ನತೆಗೆ ಒಳಗಾಗಿದ್ದ ಮಗನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿ ವೈದ್ಯರು ಬಾಲಕನ ಆರೋಗ್ಯ ತಪಾಸಣೆ ಮಾಡಿದ್ದು ಈ ವೇಳೆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಬಾಲಕನ ಜೊತೆ ಆಪ್ತ ಸಮಾಲೋಚನೆ ನಡೆಸಿದ ಬಳಿಕ ಚಂದ್ರ ಕೆ ಹೆಮ್ಮಾಡಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿ ಎಂದು ಬಹಿರಂಗಗೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಾತ್ರೋರಾತ್ರಿ ಚಂದ್ರ ಕೆ. ಹೆಮ್ಮಾಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕನ ತಂದೆಯು ನೀಡಿದ ದೂರಿನ ಮೇರೆಗೆ ಬೈಂದೂರು ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಆರೋಪಿ ಚಂದ್ರ ಕೆ ಹೆಮ್ಮಾಡಿಯನ್ನು ಬಂಧಿಸಿದ್ದಾರೆ. ಆರೋಪಿಯು ಈ ಬಾಲಕ ಮಾತ್ರವಲ್ಲದೆ ಇನ್ನೂ ಹಲವಾರು ಬಾಲಕರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿರುವುದು ತನಿಖೆಯ ಬಳಿಕ ತಿಳಿದುಬಂದಿದೆ. ಈ ಸಂಬಂಧ ಇನ್ನೂ ಹಲವಾರು ದೂರುಗಳು ದಾಖಲಾಗುವ ಸಂಭವವಿದೆ.

ಕಳೆದ ಹಲವಾರು ವರ್ಷಗಳಿಂದ ಈತ ಬಾಲಕರನ್ನು ತನ್ನ ಸಲಿಂಗಕಾಮದ ತೆವಲಿಗೆ ಬಳಸಿಕೊಂಡು ದೌರ್ಜನ್ಯ ನಡೆಸಿರುವ ಕುರಿತು ಈಗ ಕೇಳಿಬರುತ್ತಿದೆ. ಆರೋಪಿ ಚಂದ್ರ. ಕೆ ಹೆಮ್ಮಾಡಿ ಈ ಹಿಂದೆ ಉದಯವಾಣಿಯಲ್ಲಿ ಬಿಡಿಸುದ್ದಿಗಾರನಾಗಿದ್ದು ಬಳಿಕ ವಿಜಯ ಕರ್ನಾಟಕ ಸೇರಿಕೊಂಡಿದ್ದ. ಈತ ತನ್ನ ವರದಿಗಾರಿಕೆಯ ವೇಳೆ ಹಲವಾರು ವ್ಯಕ್ತಿಗಳಿಗೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆಡಿಯೊ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಆರೋಪಿಯು ಆಕಾಶವಾಣಿ ಕಲಾವಿದನೂ ಆಗಿದ್ದು ವಂಡ್ಸೆ ಹೋಬಳಿಯ ಸಾಹಿತ್ಯ ಪರಿಷತ್ ಅಧ್ಯಕ್ಷನೂ ಆಗಿರುತ್ತಾನೆ.

ದೌರ್ಜನ್ಯಕ್ಕೆ ಒಳಗಾದ ಇನ್ನಷ್ಟು ವಿದ್ಯಾರ್ಥಿಗಳನ್ನು ಗುರುತಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿ ಆಪ್ತ ಸಮಾಲೋಚನೆ ಮಾಡಿ ಆರೋಪಿ ವಿರುದ್ಧ ಇನ್ನಷ್ಟು ದೂರುಗಳನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷ ಲಕ್ಷ್ಮಣ ನಿಂಬರಗಿ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಬೈಂದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ