ಮಂಗಳೂರು: ಏಳು ಮಂದಿಯಿಂದ ಯುವತಿಯ ಸಾಮೂಹಿಕ ಅತ್ಯಾಚಾರ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಸಮೀಪದ ತೋಟ ಬೆಂಗ್ರೆಯಲ್ಲಿ ಯುವತಿಯೋರ್ವಳ ಮೇಲೆ ಎರಗಿದ ಏಳು ಮಂದಿ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ ಕಳವಳಕಾರಿ ಘಟನೆ ವರದಿಯಾಗಿದೆ.

ಕಾರ್ಖಾನೆಯೊಂದರ ಕಾರ್ಮಿಕಳಾಗಿದ್ದ ಬಂಟ್ವಾಳದ ಯುವತಿ ಹೊರರಾಜ್ಯದ ತನ್ನ ಗೆಳೆಯನೊಂದಿಗೆ ತೋಟ ಬೆಂಗ್ರೆ ಅಳಿವೆಬಾಗಿಲು ಬೀಚ್ ಗೆ ತೆರಳಿದ್ದು, ಅಲ್ಲಿನ ದ್ವೀಪವೊಂದಕ್ಕೆ ಹೋಗಿದ್ದನ್ನು ಕಂಡ ದುಷ್ಕರ್ಮಿಗಳು ಬೆದರಿಕೆ ಒಡ್ಡಿ ಅತ್ಯಾಚಾರ ಎಸಗಿದ್ದಾರೆ. ಯುವಕನಿಗೆ ಹಲ್ಲೆಗೈದು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದರು.

ಸಾಮೂಹಿಕ ಅತ್ಯಾಚಾರದ ಬಗ್ಗೆ ಪೊಲೀಸ್ ಠಾಣೆಯೊಂದಕ್ಕೆ ಮಾಹಿತಿ ನೀಡಿದ್ದರೂ ಪೊಲೀಸರು ದೂರು ದಾಖಲಿಸಿರಲಿಲ್ಲ ಎಂದು ನಗರ ಮಹಿಳಾ ಠಾಣೆಗೆ ದೂರು ನೀಡಿರುವ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿರುವ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಏಳು ಮಂದಿ ಆರೋಪಿಗಳ ವಿರುದ್ಧ ಅತ್ಯಾಚಾರ, ಹಲ್ಲೆ ಮತ್ತು ಬೆದರಿಕೆ ಪ್ರಕರಣ ದಾಖಲಿಸಲಾಗಿದೆ.

ಅತ್ಯಾಚಾರ ಘಟನೆಯು ನ.18ರ ಮಧ್ಯಾಹ್ನ 12ರ ಬಳಿಕ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಯುವತಿ ಮತ್ತು ಅತ್ಯಾಚಾರಿಗಳು ಒಂದೇ ಸಮುದಾಯಕ್ಕೆ ಸೇರಿದವರು ಎನ್ನಲಾಗಿದ್ದು, ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕರು ಕೂಡ ಈ ಪ್ರಕರಣದಲ್ಲಿದ್ದಾರೆ ಎನ್ನಲಾಗಿದೆ.

ಯುವತಿಯ ಮೇಲೆ ಮೀನುಗಾರರು ಅತ್ಯಾಚಾರ ಎಸಗಿದ ಘಟನೆಯನ್ನು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಖಚಿತಪಡಿಸಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ