ಅಯೋಧ್ಯೆ ರಾಮ ಮಂದಿರ ವಿವಾದ: ಕೇಂದ್ರಕ್ಕೆ ಗಡುವು ನೀಡಿದ ಪೇಜಾವರ ಶ್ರೀ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಅಯೋಧ್ಯೆ ರಾಮ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಗುಡುಗಿರುವ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಮಂದಿರ ನಿರ್ಮಾಣ ಮಾಡುವಂತೆ ಫೆಬ್ರವರಿವರೆಗೂ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರಕ್ಕೆ ಗಡುವು ನೀಡಿದೆ.

ಮಂಗಳೂರಿನ ನೆಹರೂ ಮೈದಾನದಲ್ಲಿ ವಿಹೆಚ್'ಪಿ ಆಯೋಜಿಸಿದ್ದ ಜನಾಗ್ರಹ ಸಭೆಯಲ್ಲಿ ಮಾತನಾಡಿರುವ ಅವರು, ರಾಮ ಮಂದಿರ ನಿರ್ಮಾಣ ಮಾಡದಿರುವುದು ರಾಷ್ಟ್ರಕ್ಕೆ ಮಾಡಿದ ಅವಮಾನ. ಮಂದಿರ ನಿರ್ಮಾಣಕ್ಕಾಗಿ ನಾಲ್ಕೂವರೆ ವರ್ಷಗಳಿಂದಲೂ ಕಾಯುತ್ತಿದ್ದೇನೆ. ಇನ್ನೂ ತಾಳ್ಮೆಯಿಂದಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಂದಿರ ನಿರ್ಮಾಣ ವಿಚಾರದತ್ತ ಪ್ರಧಾನಿ ಮೋದಿ ಮನಸ್ಸು ಮಾಡಬೇಕಿದೆ. ಇದಕ್ಕೆ ಅವರ ಒಪ್ಪುತ್ತಾರೆಂಬ ವಿಶ್ವಾಸವಿದೆ. ಇದು ರಾಜಕೀಯವಲ್ಲ. ಚುನಾವಣೆಗೂ ಮಂದಿರಕ್ಕೂ ಸಂಬಂಧಿವಿಲ್ಲ. ನಾವು ಈಗಾಗಲೇ ನಾಲ್ಕೂವರೆ ವರ್ಷ ಕಾದಿದ್ದೇವೆ. ಮಂದಿರ ನಿರ್ಮಾಣಕ್ಕಾಗಿ ಸರ್ಕಾರ ಸಂಸತ್ತಿನಲ್ಲಿ ಮಸೂದೆ ಮಂಡಿಸಬೇಕು. ಇದು ಸಾಧ್ಯವಾಗದೇ ಹೋದರೆ, ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ತಿಳಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುವುದಿಲ್ಲ. ಒಂದು ವೇಳೆ ಮಾಡಿದ್ದೇ ಆದರೆ, ಜನರೇ ಆ ಪಕ್ಷಕ್ಕೆ ಚುನಾವಣೆ ವೇಳೆ ದಿಟ್ಟ ಪಾಠವನ್ನು ಕಲಿಸುತ್ತಾರೆ. ಆಗತ್ಯಬಿದ್ದರೆ, ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಮೇಲೆ ಒತ್ತಡ ಹೇರಲು ಸಂಸದರು ರಾಜೀನಾಮೆ ನೀಡಬೇಕು. ರಾಮ ಮಂದಿರ ಹಿಂದೂಗಳ ಹೆಮ್ಮೆಯ ಪ್ರತೀಕವಾಗಿದೆ ಎಂದಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ