166 ಮಂದಿ ಬಲಿ ಪಡೆದ 26/11 ಮುಂಬೈ ದಾಳಿಗೆ ಇಂದಿಗೆ 10 ವರ್ಷ

ಕರಾವಳಿ ಕರ್ನಾಟಕ ವರದಿ

ಮುಂಬೈ:
ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರರು ದಾಳಿ ನಡೆಸಿ ಇಂದಿಗೆ 10 ವರ್ಷಗಳು ಕಳೆದಿವೆ.

ಸತತ ಮೂರು ದಿನಗಳ ಕಾಲ ಮುಂಬೈ ಮಹಾನಗರಿ ಉಗ್ರರ ಕಪಮುಷ್ಠಿಯಲ್ಲಿ ನಲುಗಿತ್ತು. 26/11 ಎಂದು ನಾಮಕರಣಗೊಂಡ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ 166 ಮಂದಿ ಬಲಿಯಾಗಿದ್ದರು.

ನ.26 ರಂದು ಪಾಕಿಸ್ತಾನದ 10 ಮಂದಿ ಉಗ್ರರು ಬೋಟ್ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್, ರೈಲ್ವೆನಿಲ್ದಾಣ, ಆಸ್ಪತ್ರೆ. ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿ ನಡೆಸಿ 166 ಜನರ ಸಾವಿಗೆ ಕಾರಣರಾದರು. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ದಾಳಿ ನಡೆದು ನಾಲ್ಕು ವರ್ಷಗಳ ಬಳಿಕ ಉಗ್ರ ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಲಾಗಿತ್ತು. ದಾಳಿ ವಿಚಾರ ತಿಳಿಯುತ್ತಲೇ ಜನರ ರಕ್ಷಣೆಗೆ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ ಮತ್ತು ತುಕಾರಾಮ್ ಓಂಬ್ಳೆ ಮತ್ತು ಯೋಧ ಸಂದೀಪ್ ಉನ್ನಿಕೃಷ್ಣನ್ ಉಗ್ರರಿಂದ ಹತರಾದರು. ಇದೇ ವೇಳೆ ಪೊಲೀಸ್ ಪೇದೆ ತುಕಾರಾಮ್ ಕಸಬ್'ನ ಮೇಲೆ ಗುಂಡು ಹಾರಿಸಿ, ಆತ ಸಿಕ್ಕಿಬೀಳುವಂತೆ ಮಾಡಿದ್ದರು. ಕಸಬ್ ನನ್ನು 2012ರ ನ.21 ರಂದು ಪುಣೆಯ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

2008ರ ಭಯೋತ್ಪಾದಕರು ನಡೆಸಿದ ದಾಳಿ ಬಳಿಕ ಮುಂಬೈ ತನ್ನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದೆ. ಭಾರತೀಯ ಸೇನೆ, ಕೋಸ್ಟಲ್ ಗಾರ್ಡ್ ಮತ್ತು ಮರೈನ್ ಪೊಲೀಸ್ ಸೇರಿ ಮೂರು ಹಂತದಲ್ಲಿ ಕರಾವಳಿ ಪ್ರದೇಶದಲ್ಲಿ ಹದ್ದಿನಕಣ್ಣಡಲಾಗಿದೆ. ಜೊತೆಗೆ ಮಹಾರಾಷ್ಟ್ರ ಸರ್ಕಾರ ರಾಡಾರ್, ಹೈಪವರ್ ಅಂಡರ್ ವಾಟರ್ ಸೆನ್ಸರ್, ಡ್ರೈವರ್ ಡಿಟೆಕ್ಷನ್ ಅಂಡರ್ ವಾಟರ್ ಸೆನ್ಸರ್, ಡ್ರೈವರ್ ಡಿಟೆಕ್ಷನ್ ಸೋನಾರ್ಸ್ ಇರುವ ಆರ್ಟ್ ಹಾರ್ಬರ್ ಡಿಫೆನ್ಸ್ ಸಿಸ್ಟರ್ ಜಾರಿಗೊಳಿಸಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ