ದೇವೇಗೌಡ, ಕುಮಾರಸ್ವಾಮಿ 'ಅವಕಾಶವಾದಿ' ರಾಜಕಾರಣಿಗಳು: ಯಡಿಯೂರಪ್ಪ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
  ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ದೇಶದಲ್ಲಿಯೇ  ಅತಿ ಹೆಚ್ಚಿನ ಅವಕಾಶವಾದಿ ರಾಜಕಾರಣಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಭಾನುವಾರ ಪ್ರತಿಭಟನಾನಿರತ ರೈತ ಮಹಿಳೆ ಕುರಿತು ಮುಖ್ಯಮಂತ್ರಿ ನೀಡಿರುವ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಯಡಿಯೂರಪ್ಪ, ಕುಮಾರಸ್ವಾಮಿ ಹೇಳಿಕೆ  ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ, ರೈತರನ್ನು ಗುಂಡಾಗಳೆಂದು ಕರೆದಿರುವುದು ಉದ್ದಟತನದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕುಮಾರಸ್ವಾಮಿ ಬಗ್ಗೆ ವಾಕ್ಪ್ರಹಾರ ನಡೆಸಿದ ಯಡಿಯೂರಪ್ಪ, ಸಾರ್ವಜನಿಕ ಜೀವನದಲ್ಲಿ ಇರುವವರು ಟೀಕೆಗಳನ್ನು ಗೌರವಯುತವಾಗಿ ಸ್ವೀಕರಿಸಬೇಕು ಎಂದರು.

ತಲೆಯಲ್ಲಿ ಅಧಿಕಾರದ ಮದವೇರಿದಂತೆ ಕುಮಾರಸ್ವಾಮಿ ಕಾಣುತ್ತಿದ್ದು,  ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ನಾಯಕರು , ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಚಿಂತಿಸಬೇಕು, ಅವರಿಗೆ ಆತ್ಮಭಿಮಾನ ಇದ್ದರೆ, ನಿರ್ಧಾರ ಅನುಷ್ಠಾನಗೊಳಿಸುವಂತೆ ಅಥವಾ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಅವರನ್ನು ಕೇಳಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ.

ರೈತ ಮಹಿಳೆ ಕುರಿತು ಕುಮಾರಸ್ವಾಮಿ ಆಡಿರುವ ಉದ್ದಟನದ ಹೇಳಿಕೆ ವಿರೋಧಿಸಿ  ಹಾಗೂ ರಾಜ್ಯದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು  ನಾಳೆ ಜಿಲ್ಲಾ ಹಾಗೂ ತಾಲೂಕಿನಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ