ಶಿವಮೊಗ್ಗ: ಸಿಲಿಂಡರ್ ಲಾರಿ ಸ್ಫೋಟ: ಚಾಲಕ ಸಜೀವ ದಹನ

ಕರಾವಳಿ ಕರ್ನಾಟಕ ವರದಿ

ಶಿವಮೊಗ್ಗ:
ಸಾಗರ ತಾಳಗುಪ್ಪ ಮಧ್ಯ ಮುಂಡಿಗೆಹಳ್ಳಿ ಎಂಬಲ್ಲಿ ಸಿಲಿಂಡರ್ ತುಂಬಿದ್ದ ಲಾರಿಯೊಂದು ಸ್ಫೋಟಗೊಂಡ ಪರಿಣಾಮ ಚಾಲಕ ಸಜೀವ ದಹನಗೊಂಡ ಕಳವಳಕಾರಿ ಘಟನೆ ವರದಿಯಾಗಿದೆ.

ಸಾಗರದಿಂದ ಕಾರ್ಗಲ್ ಕಡೆಗೆ ಇಂಡಿಯನ್ ಗ್ಯಾಸ್ ಸಿಲಿಂಡರ್ ಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದು ಇಪ್ಪತ್ತಕ್ಕೂ ಅಧಿಕ ಸಿಲಿಂಡರ್ ಗಳು ಸ್ಫೋಟಿಸಿವೆ. ಬೆಳಗಿನ ಜಾವ ನಾಲ್ಕುವರೆ ಹೊತ್ತಿಗೆ ಈ ದುರಂತ ಸಂಭವಿಸಿತು.

ಲಾರಿಯ ನಂಬರ್ ಪ್ಲೇಟ್ ಕೂಡ ಅಗ್ನಿಗಾಹುತಿಯಾಗಿದ್ದು, ಲಾರಿ ಯಾರಿಗೆ ಸೇರಿದ್ದು, ಲಾರಿಯಲ್ಲಿ ಎಷ್ಟು ಜನರಿದ್ದರು ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಅಗ್ನಿಶಾಮಕ ದಳ ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸಿದರು.
ಸಾಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ