ಬೈಕ್ ಅಪಘಾತದ ಗಾಯಾಳು ಯುವಕ ಮೃತ್ಯು

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ರವಿವಾರದಂದು ಹೊನ್ನಕಟ್ಟೆಯಲ್ಲಿ ನಡೆದ ಬೈಕ್ ಅಪಘಾತದ ಗಾಯಾಳು ಯುವಕ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಳ್ಳಾಲ ಸುಭಾಷ್ ನಗರದ ಶೇಖರ ಎಂಬವರ ಮಗ ಅಕ್ಷಯ(23) ಎಂಬವರು ಮೃತಪಟ್ಟವರು.
ಅಕ್ಷಯ ಅವರು ಮಂಗಳೂರಿನಿಂದ ಸುರತ್ಕಲ್ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭ ಹೊನ್ನಕಟ್ಟೆ ಸಿಗ್ನಲ್ ಬಳಿ ರಸ್ತೆ ದಾಟುತ್ತಿದ್ದ ಹೊನ್ನಕಟ್ಟೆ ಕೋಡಿಕೆರೆಯ ನಾರಾಯಣ ಕುಲಾಲ್(65) ಎಂಬವರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಬಳಿಕ ರಸ್ತೆ ವಿಭಾಜಕ್ಕೆ ಡಿಕ್ಕಿ ಹೊಡೆದಿತ್ತು. ನಾರಾಯಣ ಅವರು ಅಪಘಾತದ ತೀವೃತೆಗೆ ಸ್ಥಳದಲ್ಲೇ ಸಾವಪ್ಪಿದ್ದರು.

ಗಂಭೀರ ಗಾಯಗೊಂಡಿದ್ದ ಅಕ್ಷಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಾವಪ್ಪಿದ್ದಾರೆ.

ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ