ಹತ್ತು ವರ್ಷದಿಂದ ಭಡ್ತಿಗೆ ತಡೆ: ಅಟ್ರಾಸಿಟಿ ದೂರು ನೀಡಿದ ಪಿಡಿಓ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಸುಳ್ಳು ಪ್ರಕರಣ ಸೃಷ್ಠಿಸಿ ಹತ್ತು ವರ್ಷಗಳಿಂದ ಭಡ್ತಿ ನೀಡದೆ ಸತಾಯಿಸಲಾಗಿದೆ ಎಂದು ಗಂಗೊಳ್ಳಿ ಪೊಲೀಸರಿಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಎಸ್.ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಉಡುಪಿ ತಾಲೂಕು ಪಂಚಾಯತ್ ವ್ಯಾಪ್ತಿಯ ವಡ್ಡರ್ಸೆ ಗ್ರಾಮ ಪಂಚಾಯತ್ನಲ್ಲಿ ಕಾರ್ಯದರ್ಶಿ ಗ್ರೇಡ್-1 ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹೇರಿಕುದ್ರು ನಿವಾಸಿ ಉಮಾಶಂಕರ ಹೆಚ್(38) ಅವರು ದೂರು ನೀಡಿದವರು.

ವಿಶ್ವನಾಥ ಪೂಜಾರಿ,  ಪ್ರಾಣೇಶ ರಾವ್, ರಾಜೇಂದ್ರ ಬೇಕಲ್,  ರಾಮದಾಸ ಇವರ ಅಧೀನ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನಿರಂತರ ಕಿರುಕುಳ ನೀಡಿದ್ದಾರೆ ಎಂದು ಉಮಾಶಂಕರ ಅವರು ಆರೋಪಿಸಿದ್ದಾರೆ.

ಉಮಾಶಂಕರ  ಅವರು 2007ರಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್ ನ ಕಾರ್ಯದರ್ಶಿಯಾಗಿದ್ದಾಗ 2007-08 ಇಸ್ವಿಯ ಲೆಕ್ಕಪತರ್ದಲ್ಲಿ ಅವ್ಯವಹಾರ ಆಗಿದೆ ಎಂದು ಸುಳ್ಳು ವರದಿಯನ್ನು 1ನೇ ಆರೋಪಿ ಇತರ ಆರೋಪಿಗಳ ಮುಖಾಂತರ ಸುಳ್ಳು ದಾಖಲೆ ಹಾಗೂ ವರದಿಯನ್ನು ಪುಷ್ಠೀಕರಿಸಿ ಫಿರ್ಯಾದಿಯನ್ನು ಅಮಾನತು ಮಾಡಲಾಗಿತ್ತು. ಉಮಾಶಂಕರ್ ಅವರು ಮಾನಸಿಕ ಒತ್ತಡದಿಂದ ರಜೆಯಲ್ಲಿದ್ದರೂ  ಸಹ ಏಕಮುಖ ಇಲಾಖಾ ತನಿಖೆ ನಡೆಸಿ, ಅವರಿಗೆ ಯಾವುದೇ ಅವಕಾಶವನ್ನು ನೀಡದೇ ತಪ್ಪಿತಸ್ಥನೆಂದು ಸುಳ್ಳು ವರದಿಯನ್ನು ನೀಡಿದ್ದಾರೆ ಎನ್ನಲಾಗಿದೆ. 

ಉಮಾಶಂಕರ್ ಅವರ ಮೇಲೆ ಹೊರಿಸಲಾಗಿದ್ದ ಆರೋಪದಲ್ಲಿ ಕಾರ್ಯದರ್ಶಿಯೊಂದಿಗೆ ಗುಜ್ಜಾಡಿ ಪಂಚಾಯತ್ ನ ಅಧ್ಯಕ್ಷರು ಸಮಾನ ಜವಾಬ್ದಾರಿ ಇದ್ದು, ಲೋಕ ನೌಕರನಾಗಿದ್ದರೂ ಸಹ ಉದ್ದೇಶಪೂರ್ವಕವಾಗಿ ಅವರನ್ನು ಬಿಟ್ಟಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ.

 1ನೇ ಆರೋಪಿ(ವಿಶ್ವನಾಥ ಪೂಜಾರಿ) ಕೆ.ಸಿ.ಎಸ್.ಆರ್ ರೂಲ್ 32 ನಲ್ಲಿ ಪ್ರಭಾರ ಅಧಿಕಾರಿಯಾಗಿದ್ದು, ತನ್ನ ವ್ಯಾಪ್ತಿ ಮೀರಿ  ಪಿರ್ಯಾದಿದಾರರ ವಿರುದ್ಧ ಸುಳ್ಳು ಕ್ರಿಮಿನಲ್ ಮೊಕದ್ದಮೆ ಹಾಗೂ ಸಿವಿಲ್ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾಗಿರುತ್ತದೆ. ಸಮಾನ ರೀತಿಯಲ್ಲಿ ವಾರ್ಷಿಕ ಲೆಕ್ಕಪತ್ರದಲ್ಲಿ ಲೋಪದೋಷಗಳು ಇತರ ಸಮಕಾಲೀನ ಕಾರ್ಯದರ್ಶಿಗಳು ಪಂಚಾತಿಯಲ್ಲಿ ಕಂಡು ಬಂದಿದ್ದರೂ ಕೂಡ ಅವರುಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ವ್ಯತಿರಿಕ್ತವಾಗಿ ಅವರಿಗೆ ಭಡ್ತಿ ನೀಡಲಾಗಿದೆ ಎಂದು ದೂರಿನಲ್ಲಿ ಉಮಾಶಂಕರ್ ಅವರು ವಿವರಿಸಿದ್ದು,  ಬೇಜಾಮೀನು ಸುಳ್ಳು ಪ್ರಕರಣ ಸೃಷ್ಠಿಸಿ 10 ವರ್ಷಗಳಿಂದ ಭಡ್ತಿ ನೀಡದಂತೆ ಸುಳ್ಳು ಪ್ರಕರಣ, ದಾಖಲೆ ಹಾಗೂ ಸಾಕ್ಷಿಗಳನ್ನು ಸೃಷ್ಠಿಸಿದ್ದಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಸ್.ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ