ಫೇಸ್‌ಬುಕ್ ನಲ್ಲಿ ದ್ವೇಷದ ಪೋಸ್ಟ್: ಆರೋಪಿ ಬಂಧನ

ಕರಾವಳಿ ಕರ್ನಾಟಕ ವರದಿ

ಮೂಡುಬಿದಿರೆ:
ನಕಲಿ ಫೇಸ್ ಬುಕ್ ಖಾತೆಗಳ ಮೂಲಕ ಕೋಮು ಸಂಘರ್ಷಕ್ಕೆ ಕಾರಣವಾಗುವಂಥ ಪ್ರಚೋದನಕಾರಿ ಸಂದೇಶಗಳನ್ನು ಹಾಕುತ್ತಿದ್ದ ಆರೋಪ ಮತ್ತು ಉದ್ಯಮಿಯೋರ್ವರಿಗೆ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸುಳ್ಯದ ಬೆಳ್ಳಾರೆಯ ಇಬ್ರಾಹಿಂ ಖಲೀಲ್ ಎಂಬವರನ್ನು ಬಂಧಿಸಲಾಗಿದೆ. ಖಲೀಲ್ ಅಬುದಾಭಿಯಲ್ಲಿ ಉದ್ಯೋಗಿಯಾಗಿದ್ದು, ಹಲವು ನಕಲಿ ಫೇಸ್ ಬುಕ್ ಖಾತೆಗಳ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹಾಕುತ್ತಿದ್ದರೆನ್ನಲಾಗಿದೆ. ಇದನ್ನು ಪತ್ತೆ ಹಚ್ಚಿದ ಅಬ್ದುಲ್ ಲತೀಫ್ ಎಂಬವರಿಗೆ ಖಲೀಲ್ ಕೊಲೆ ಬೆದರಿಕೆ ಒಡ್ಡಿದ್ದಾರೆಂದು ಮೂಡುಬಿದಿರೆ ಠಾಣೆಯಲ್ಲಿ ಜು. 25ರಂದು ಪ್ರಕರಣ ದಾಖಲಾಗಿತ್ತು.
ವಿದೇಶದಲ್ಲಿದ್ದ ಆರೋಪಿ ಖಲೀಲ್ ಅಕ್ಟೋಬರ್31ರಂದು ಊರಿಗೆ ಬಂದ ಮಾಹಿತಿಯನ್ವಯ ಪೊಲೀಸರು ಸುಳ್ಯಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ