ಮಂಗಳೂರು ಮಸಾಜ್ ಪಾರ್ಲರ್ಗೆ ದಾಳಿ: ಮಹಿಳೆಯರ ರಕ್ಷಣೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ನಗರದ ಕೆ.ಎಸ್.ರಾವ್ ರಸ್ತೆಯಲ್ಲಿನ ಆಯುರ್ವೇದ ಮಸಾಜ್ ಪಾರ್ಲರ್ ಒಂದಕ್ಕೆ ದಾಳಿಗೈದ ಬಂದರು ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಮಹಿಳೆಯರನ್ನು ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿದೆ.

ದಾಳಿ ಸಂದರ್ಭ ಓರ್ವನನ್ನು ಬಂಧಿಸಲಾಗಿದೆ. ವಿಜಯಪುರದ ರಾಜು(20) ಎಂಬಾತನನ್ನು ಬಂಧಿಸಲಾಗಿದೆ.

ಫ್ರಾನ್ಸಿಸ್ ಪಿರೇರಾ ಎಂಬವರ ಮಾಲಕತ್ವದ ಮಸಾಜ್ ಪಾರ್ಲರ್ ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಅನ್ವಯ ಪೊಲೀಸರು ಬುಧವಾರ ದಾಳಿ ನಡೆಸಿದ್ದರು.


 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ