ದುನಿಯಾ ವಿಜಯ್ ಪತ್ನಿಗೆ ನಿರೀಕ್ಷಣಾ ಜಾಮೀನು. ಬಂಧನ ಭೀತಿ ಸದ್ಯಕ್ಕಿಲ್ಲ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು
: ಹಲ್ಲೆ ಪ್ರಕರಣದ ಆರೋಪಿ ಆಗಿ ಪೊಲೀಸರಿಗೆ ಬೇಕಾಗಿದ್ದ ನಟ ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರಿಗೆ ಇಂದು ನಿರೀಕ್ಷಣಾ ಜಾಮೀನು ದೊರೆತಿದೆ. ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಪೊಲೀಸರು ವಿಚಾರಣೆಗಾಗಿ ನಾಗರತ್ನ ಅವರನ್ನು ಹುಡುಕುತ್ತಿದ್ದರು ಆದರೆ ಅವರು ತಲೆಮರೆಸಿಕೊಂಡಿದ್ದರು.

ಕಳೆದ ವಾರದಿಂದಲೂ ಪೊಲೀಸರಿಂದ ತಲೆಮರೆಸಿಕೊಂಡಿದ್ದ ನಾಗರತ್ನ ಅವರಿಗೆ ಇಂದು ನಿರೀಕ್ಷಣಾ ಜಾಮೀನು ದೊರೆತಿದೆ. ಹಾಗಾಗಿ ಅವರು ನಿರಾಳವಾಗಲಿದ್ದಾರೆ. ಅವರಿಗೆ ಬಂಧನದ ಭೀತಿ ಇಲ್ಲವಾಗಿದೆ.

ದುನಿಯಾ ವಿಜಯ್ ಅವರು ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗನ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ ಮಾರನೇಯ ದಿನ ದುನಿಯಾ ವಿಜಯ್ ಮನೆಗೆ ಬಂದಿದ್ದ ನಾಗರತ್ನ ಏಕಾ-ಏಕಿ ಚಪ್ಪಲಿಯಿಂದ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ್ದರು ಅದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ