ರಾಜಸ್ಥಾನದಲ್ಲಿ ಈ ಬಾರಿ ಮುದುಡಲಿದೆ ಕಮಲ, ಕೈಗೆ ಜಯ

ಕರಾವಳಿ ಕರ್ನಾಟಕ ವರದಿ

ರಾಜಸ್ಥಾನದ ವಸುಂಧರಾರಾಜೇ ನೇತೃತ್ವದ ಸರ್ಕಾರದ ವಿರುದ್ಧ ಜನಮತಾಭಿಪ್ರಾಯ ವ್ಯಕ್ತವಾಗಿದೆ.ಸಮೀಕ್ಷೆ ಪ್ರಕಾರ,ಬರೋಬ್ಬರಿ ನೂರು ಸೀಟುಗಳ ನಷ್ಟ ಅನುಭವಿಸಲಿದೆ. 2013ರ ಚುನಾವಣೆಯಲ್ಲಿ 163 ಸೀಟುಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಕೇವಲ 63 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ.

200 ಸೀಟುಗಳ ಪೈಕಿ ಕೇವಲ 21ರಲ್ಲಿ ಗೆದ್ದಿದ್ದ ಕಾಂಗ್ರೆಸ್, ಈ ಚುನಾವಣೆಯಲ್ಲಿ 129 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯಲಿದೆ. ಇಲ್ಲಿ ಸರ್ಕಾರ ರಚನೆಗೆ 101 ಸ್ಥಾನಗಳ ಅವಶ್ಯಕತೆಯಿದೆ ಎಂದು ಟೈಮ್ಸ್ ನೌ -ಸೀ ವೋಟರ್ ಸಮೀಕ್ಷೆಗಳ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಇನ್ನು ಎಬಿಪಿ ನ್ಯೂಸ್ ಪ್ರಕಾರ, ಕಳೆದ ಬಾರಿ 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 163 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ, ಈಬಾರಿ ಕೇವಲ 56 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಲಿದೆ.

ಕಳೆದ ಬಾರಿ ಕೇವಲ 21 ಸೀಟು ಗೆದ್ದಿದ್ದ ಕಾಂಗ್ರೆಸ್ ಈಬಾರಿ ತನಗೇ ಅಚ್ಚರಿ ಆಗುವಂತೆ 142 ಸೀಟುಗಳಲ್ಲಿ ಗೆಲ್ಲಲಿದೆ. ಇನ್ನೆರಡು ಸ್ಥಾನಗಳು ಇತರ ಪಕ್ಷಗಳ ಪಾಲಾಗಲಿವೆ ಎಂದು ಸಮೀಕ್ಷೆ ಬಂದಿದೆ.ಈಗ ಟೈಮ್ಸ್ ನೌ ಸಿಎನ್ಎಕ್ಸ್ ವರದಿ ಕೂಡಾ ಇದಕ್ಕಿಂತ ವಿಭಿನ್ನವಾಗೇನು ಇಲ್ಲ, ಕಾಂಗ್ರೆಸ್ಸಿಗೆ ಹಿತವಾಗಿ ಫಲಿತಾಂಶ ಬಂದಿದೆ.

ಟೈಮ್ಸ್ ನೌ ಸಿಎನ್ಎಕ್ಸ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ಈ ಬಾರಿ 110 ರಿಂದ 130 ಸ್ಥಾನಗಳನ್ನು ಪಡೆಯುವ ಮೂಲಕ 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲಿದೆ. ಬಿಜೆಪಿಯು 70 ರಿಂದ 80 ಸ್ಥಾನ ಗಳಿಸಬಹುದು. ಬಿಎಸ್ಪಿ 1 ರಿಂದ 3, ಜಾಟ್ ನಾಯಕ ಹನುಮಾನ್ ಬೆನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ, ಘನಶ್ಯಾಮ್ ತಿವಾರಿಯವರ ಭಾರತ್ ವಾಹಿನಿ ಪಾರ್ಟಿ ಸೇರಿ ಉಳಿದ ಪಕ್ಷಗಳು 7 ಸ್ಥಾನ ಗಳಿಸಬಹುದು

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ