ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: ಇಬ್ಬರು ಪೊಲೀಸರು, ದೂರದರ್ಶನ ಕ್ಯಾಮೆರಾಮೆನ್ ಸಾವು

ಕರಾವಳಿ ಕರ್ನಾಟಕ ವರದಿ

ದಾಂತೇವಾಡ:
ಛತ್ತೀಸ್‌ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿ ದೂರದರ್ಶನದ ಕ್ಯಾಮೆರಾಮೆನ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಅರಣ್ ಪುರದಲ್ಲಿ ನಕ್ಸಲರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಎನ್'ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಹಾಗೂ ದೂರದರ್ಶನದ ಕ್ಯಾಮೆರಾಮೆನ್ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಮೃತಪಟ್ಟವರನ್ನು ಸಬ್ ಇನ್ಸ್ ಪೆಕ್ಟರ್ ರುದ್ರ ಪ್ರತಾಪ್, ಸಹಾಯಕ ಪೇತದೆ ಮಂಗಲು ಮತ್ತು ದೂರದರ್ಶನದ ಕ್ಯಾಮೆರಾಮೆನ್ ಅಚ್ಯುತಾನಂದ್ ಎಂದು ಗುರ್ತಿಸಲಾಗಿದೆ.

ಎಂದಿನಂತೆ ಇಂದು ಬೆಳಗ್ಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಭದ್ರತಾ ಪಡೆಗಳೊಂದಿಗೆ ದೂರದರ್ಶನ ಕ್ಯಾಮೆರಾಮೆನ್ ಕೂಡ ತೆರಳಿದ್ದರು. ನಕ್ಸಲರಿದ್ದ ಸ್ಥಳದತ್ತ ತೆರಳುತ್ತಿದ್ದಂತೆಯೇ ನಕ್ಸಲರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.

ಚುನಾವಣಾ ವರದಿ ಮಾಡುವ ಸಲುವಾಗಿ ದೂರದರ್ಶನದ ಮೂವರು ಸದಸ್ಯರ ತಂಡ ದೆಹಲಿಯಿಂದ ಛತ್ತೀಸ್ಗಢಕ್ಕೆ ಬಂದಿತ್ತು ಎಂದು ದಂತೇವಾಡ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ್ ಅವರು ಹೇಳಿದ್ದಾರೆ. ಮೃತಪಟ್ಟ ಕ್ಯಾಮೆರಾಮೆರ್ ಅಚ್ಯುತಾನಂದ ಸಾಹೂ ಒಡಿಶಾದ ಬದ್ಗದ್ ಜಿಲ್ಲೆಯ ನಿವಾಸಿಯಾಗಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ