ಇಂಡೋನೇಷ್ಯಾ ವಿಮಾನ ದುರಂತ: 189 ಪ್ರಯಾಣಿಕರಲ್ಲಿ ಒಬ್ಬರೆ ಬದುಕುಳಿದಿದ್ದು ಹೇಗೆ?

ಕರಾವಳಿ ಕರ್ನಾಟಕ ವರದಿ

ಜಕಾರ್ತ
: ಇಂಡೋನೇಷ್ಯಾ ಲಯನ್ ಏರ್ ಲೈನ್ಸ್ ವಿಮಾನ ಸಮುದ್ರದಲ್ಲಿ ಪತನಗೊಂಡು 189 ಪ್ರಯಾಣಿಕರು ಜಲಸಮಾಧಿಯಾಗಿದ್ದು ಅದೃಷ್ಟವಶಾತ್ ಒಬ್ಬರು ಮಾತ್ರ ಬದುಕುಳಿದಿದ್ದಾರೆ. ಅದು ಹೇಗೆ ಗೊತ್ತೆ? ಮುಂದೆ ಒದಿ.

ಟ್ರಾಫಿಕ್ ಜಾಮ್‌ನಿಂದ ತೊಂದರೆಗೀಡಾದವರು ಸಿಟ್ಟಾಗುವುದು ಸಾಮಾನ್ಯ. ಆದರೆ ಅದೇ ಟ್ರಾಫಿಕ್ ಜಾಮ್ ಒಬ್ಬರ ಪ್ರಾಣವನ್ನು ಉಳಿಸಿದೆ.

ಲಯನ್ ಏರ್ ವಿಮಾನ ಟೇಕ್ ಆಫ್ ಆದ 13 ನಿಮಿಷಕ್ಕೆ ನಾಪತ್ತೆಯಾಗಿ ಸಮುದ್ರದಲ್ಲಿ ಪತನವಾಗಿತ್ತು. ಇದರಲ್ಲಿ 189 ಪ್ರಯಾಣಿಕರು ಹಾಗೂ 7 ಮಂದಿ ವಿಮಾನ ಸಿಬ್ಬಂದಿ ಜಲ ಸಮಾಧಿಯಾದರು. ಆದರೇ ಅದೇ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಇಂಡೋನೇಷ್ಯಾದ ಸೋನಿ ಸೆಟ್ಯಾವಾನ್ ಎಂಬಾತ ಮಾತ್ರ ಬದುಕುಳಿದಿದ್ದಾರೆ. ಅದು ಟ್ರಾಫಿಕ್ ಜಾಮ್ ನಿಂದಾಗಿ.

ಸೆಟ್ಯಾವಾನ್ ಇಂಡೋನೇಷ್ಯಾದ ಹಣಕಾಸು ಸಚಿವಾಲಯದ ಅಧಿಕಾರಿಯಾಗಿದ್ದರು. ವಾರಕ್ಕೊಮ್ಮೆ ತನ್ನ ಸಹೋದ್ಯೋಗಿಗಳೊಂದಿಗೆ ಪಂಗ್ಕಲ್ ಪಿನಾಂಗ್ ಗೆ ತೆರಳುತ್ತಿದ್ದರು. ಎಂದಿನಂತೆ ಈ ಬಾರಿಯೂ ಜೆಟಿ 610 ಲಯನ್ ವಿಮಾನವನ್ನು ಬುಕ್ ಮಾಡಿದ್ದರು. ಆದರೆ ಸೊಕೆರ್ನೋ-ಹಟ್ಟಾ ವಿಮಾನ ನಿಲ್ದಾಣದ ದಾರಿಯಲ್ಲಿ ಭಾರೀ ಟ್ರಾಫಿಕ್ ಇದ್ದುದ್ದರಿಂದ ತಡವಾಗಿ ಬಂದ ಆತನಿಗೆ ವಿಮಾನ ಸಿಗದೇ ಬೇರೊಂದು ವಿಮಾನದಲ್ಲಿ ಪ್ರಯಾಣಿಸಿದ್ದರು.

ಸೆಟ್ಯಾವಾನ್ ತಾನು ಪ್ರಯಾಣಿಸಿದ್ದ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಲಯನ್ ವಿಮಾನ ಪತನವಾಗಿದೆ ಎಂಬ ಸುದ್ದಿ ಕೇಳಿ ಒಮ್ಮೆ ಆಘಾತವಾಗಿದೆ. ಪತನಗೊಂಡ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸ್ನೇಹಿತರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ