ಏಕ್ತಾ ಇವೆಂಟ್ ಮ್ಯಾನೇಜ್ಮೆಂಟ್‌ ಸಂಸ್ಥೆಯಿಂದ ಬ್ರಹ್ಮಾವರದಲ್ಲಿ ಯಶಸ್ವಿ ಕ್ರೀಡಾ ಸೆಮಿನಾರ್

ಕರಾವಳಿ ಕರ್ನಾಟಕ ವರದಿ

ಬ್ರಹ್ಮಾವರ
: ದೇಶದ ಹಲವಾರು ರಾಜ್ಯಗಳಿಗೆ ಪ್ರವಾಸಗೈದು ಕ್ರೀಡಾಪಟುಗಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಹಾಗೂ ಕ್ರೀಡಾಪಟುಗಳು ಎದುರಿಸುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ಕಲೆ ಹಾಕುತ್ತಿರುವ ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ  ಬ್ರಹ್ಮಾವರದಲ್ಲಿ ಕ್ರೀಡಾ ಸೇಮಿನಾರ್ ( ಕ್ರೀಡಾ  ಮಾಹಿತಿ ಕಾರ್ಯಗಾರ) ಅನ್ನು ಯಶಸ್ವಿಯಾಗಿ ನಡೆಸಿತು.

ಸೆಮಿನಾರ್‌ನ ಸಭಾ ಕಾರ್ಯ್ರಕ್ರಮದಲ್ಲಿ ಮಾತನಾಡಿದ ಕ್ರೀಡಾ ಇಲಾಖೆ ಉಡುಪಿ ಇದರ ಸಹ ನಿರ್ದೇಶಕರಾದ ರೋಷನ್‌ ಕುಮಾರ್ ಶೆಟ್ಟಿ, ಸರ್ಕಾರದ ವತಿಯಿಂದ ಹಲವಾರು ಯೋಜನೆ ಹಾಗೂ ಸವಲತ್ತುಗಳು ಜಾರಿಯಲ್ಲಿದೆ, ಅದನ್ನು ಪಡೆಯಲು ಕ್ರೀಡಾಪಟುಗಳು ಮುಂದಾಗಬೇಕು, ಪೋಷಕರು ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕೆ ವಿನಃ, ಅವರಿಗೆ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸಿ ಅವರ ಪ್ರತಿಭೆಯನ್ನು ಮೊಟಕುಗೊಳಿಬಾರದು ಎಂದು ಸಲಹೆ ನೀಡಿದರು.

ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜಿನ  ಪ್ರಾಧ್ಯಾಪಕರು ಹಾಗೂ ಕ್ರಿಕೆಟ್ ಕೋಚ್ ಆದ ವಿಜಯ ಆಳ್ವ ಮಾತನಾಡಿ ಕ್ರೀಡಾ ಪಟುಗಳು ಪಂದ್ಯಾವಳಿಗಳಿಗೆ ಮಾನಸಿಕವಾಗಿ ಹೇಗೆ ಸಜ್ಜಾಗಬೇಕು ಎಂಬುದನ್ನು ವಿವರಿಸಿದರು. 

ವಿಶೇಷ ಅತಿಥಿಗಳಾಗಿ ಆಗಮಿಸಿದ ಅಮೃತ್ ಶೆಣೈ ಮಾತನಾಡಿ ಲಗೋರಿ, ಮರಕೋತಿ ಮುಂತಾದ ಗ್ರಾಮಿಣ ಕ್ರೀಡೆಗಳು ನಮ್ಮ ದೇಹಕ್ಕೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳ್ಳಲು ಉಪಯುಕ್ತವಾಗುತಿತ್ತು. ಆದರೆ ಇಂದು ಮೊಬೈಲ್ ಗೇಮ್ಸ್  ಆಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಜೀವನದಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳಿದರು.

ನ್ಯಾಷನಲ್ ಪದವಿ ಕಾಲೇಜ್ ಬಾರ್ಕೂರ್ ರ ದೈಹಿಕ ನಿರ್ದೇಶಕರಾದ ಶ್ರೀಮತಿ ಜಯಭಾರತಿ, ಉಡುಪಿ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಖಜಾಂಚಿ ಹಾಗೂ ರಾಯಲ್ ಜಿಮ್ ನ ವ್ಯವಸ್ಥಾಪಕರೂ ಆದ ವಿಶ್ವನಾಥ್ ಕಾಮತ್ ಕಾರ್ಯಕ್ರಮಕ್ಕೆ ಶುಭ ಕೋರಿದರು.


ವಫಾ ಹೊನ್ನಾಳ  ಸ್ಪೋರ್ಟ್ಸ್ ನ ಮಹತ್ವ ಹಾಗೂ ಕ್ಲೀನ್ ಆ್ಯಂಡ್ ಗ್ರೀನ್ ಸಂಸ್ಥೆಯ ಬಗ್ಗೆ ಕಿರು ಪರಿಚಯ ನೀಡಿದರು. ವೆಂಕಟೇಶ್ ಭಟ್, ಫ್ರಾನ್ಸಿಸ್  ಬೆಳ್ಮಣ್ ಹಾಗೂ ಜಹೀರ್ ಅಬ್ಬಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವ್ಯವಸ್ಥಾಪಕರಾದ ಖಲೀಲ್ ಕೆರಾಡಿ ಸಂಸ್ಥೆಯ ಉದ್ದೇಶ ಹಾಗೂ ಗುರಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರಶಾಂತ್ ಕುಂದರ್( ಸಹ ವ್ಯವಸ್ಥಾಪಕರು), ಮುಹಮ್ಮದ್ ಅರ್ಫಾದ್, ರೇಖಾ ನಾಯಕ್, ಸಂದೀಪ್, ಮುಶಾಹೀದ್ ಕಲ್ಮಾಡಿ, ಮಹೇಶ್ ನೇಜಾರ್, ಅನಿತಾ ಡಿ' ಸೋಜಾ ಹಾಗೂ ಇನ್ನಿತರರು ಉಪಸ್ಥಿತರಿದ್ದದರು. ತಿಲಕ್ ಪೂಜಾರಿ ಸ್ವಾಗತಿಸಿದರು.  ಪದ್ಮಾ ರಾಘವೇಂದ್ರ ನಿರೂಪಿಸಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ