ಶಾರ್ಟ್‌ ಸರ್ಕ್ಯೂಟ್‌: ಮಲಗಿದ್ದ ಮಹಿಳೆ ಮನೆಯೊಳಗೆ ಸಜೀವ ದಹನ

ಕರಾವಳಿ ಕರ್ನಾಟಕ ವರದಿ

ಬಂಟ್ವಾಳ:
ತಾಲೂಕಿನ ಕಾವಳಮಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮನೆಗೆ ಹೊತ್ತಿ ಉರಿದು ಮಹಿಳೆ ಸಜೀವ ದಹನಗೊಂಡ ದಾರುಣ  ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮೃತ ಮಹಿಳೆಯನ್ನು ರೇವತಿ (40) ಎಂದು ಗುರುತಿಸಲಾಗಿದೆ. ಇವರು ಅವಿವಾಹಿತೆಯಾಗಿದ್ದು, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಮನೆಯೊಳಗೆ ಕಟ್ಟಿಗೆ ರಾಶಿ ಹಾಕಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಕಟ್ಟಿಗೆ ರಾಶಿಗೆ ತಗುಲಿ ಮನೆಗೆ ವ್ಯಾಪಿಸಿರಬಹುದು ಎಂದು ಶಂಕಿಸಲಾಗಿದೆ.

ಒಂದು ವಾರದ ಹಿಂದೆ ಈ ಮನೆಗೆ ಸಿಡಿಲು ಬಡಿದಿದ್ದು, ನಂತರ ರೇವತಿ ಅವರು ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು. ಶನಿವಾರವಷ್ಟೇ ತಮ್ಮ ಮನೆಗೆ ಹಿಂದುರಿಗಿದ್ದು, ಅಂದೇ ಈ ಅವಗಢ ಸಂಭವಿಸಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ