ಅಂಬರೀಶ್ ಮಾತು ಕೇಳದೆ ರಾದ್ಧಾಂತ ಮಾಡಿಕೊಂಡರೆ ಅರ್ಜುನ್ ಸರ್ಜಾ?

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ನಟಿ ಶೃತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ವಿರುದ್ಧ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ನೀಡಿದ್ದು ಅಂಬರೀಶ್ ಕರೆದ ಸಂಧಾನ ಸಭೆ ವಿಫಲವಾಗಿರುವುದೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಅಂಬರೀಶ್ ಮಾತು ಕೇಳದೆ ಅರ್ಜುನ್ ಸರ್ಜಾ ಇಷ್ಟೆಲ್ಲ ರಾದ್ಧಾಂತ ಮಾಡಿಕೊಂಡರು ಎನ್ನುವ ಮಾತು ಗಾಂಧಿನಗರದಲ್ಲಿ ಈಗ ಕೇಳಿಬರುತ್ತಿದೆ.

ಶೃತಿ ಅವರಿಗೆ ಅರ್ಜುನ್ ಸರ್ಜಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡುವ ಉದ್ದೇಶವಿರಲಿಲ್ಲ. ಇದಕ್ಕಾಗಿಯೇ ಸಂಧಾನಕ್ಕೆ ಹೋಗಿದ್ದರು. ನೀನು ದೂರು ಕೊಡಬೇಡ ಎಂದು ಅಂಬರೀಶ್ ಶೃತಿ ಮನವೊಲಿಸಿದ್ದರು. ಮಾಧ್ಯಮದ ಮುಂದೆ ನೀನು ಸರ್ಜಾ ಶೇಕ್‍ಹ್ಯಾಂಡ್ ಮಾಡಿ ಇಲ್ಲೆ ಎಲ್ಲಾ ಇತ್ಯರ್ಥ ಮಾಡಿಕೊಳ್ಳಿ  ಎಂದು ಅಂಬರೀಶ್ ನೀಡಿದ್ದ ಸಲಹೆಗೆ ಶ್ರುತಿ ಒಪ್ಪಿದ್ದರು.

ಆದರೆ ಸರ್ಜಾ ಮಾತ್ರ ಸಂಧಾನಕ್ಕೂ ಬರುವ ಮುನ್ನವೇ ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದರು. ಅಲ್ಲದೇ ಅಂಬರೀಶ್ ಅವರ ರಾಜಿ ಮಾತುಕತೆಗೂ ಒಪ್ಪಲು ನಿರಾಕರಿಸಿದ್ದರು.

“ನೀನು ತಪ್ಪು ಮಾಡದೇ ಇರಬಹುದು, ಅದಕ್ಕಾಗಿಯೇ ಶೃತಿ ಬಳಿ ಇದು ನನ್ನ ಅರಿವಿಗೆ ಬಾರದೇ ಆಗಿರೋದು. ನನ್ನ ಮಗಳಂತೆ ನೀನು ತಪ್ಪಾಗಿ ಅರ್ಥೈಸಿಕೊಳ್ಳದೇ ಇಲ್ಲಿಗೆ ಬಿಟ್ಟು ಬಿಡು” ಎಂದು ಶೃತಿ ಬಳಿ ಒಂದು ಮಾತು ಹೇಳಿ ಅಂತಾ ಸರ್ಜಾಗೆ ಅಂಬರೀಶ್ ಹೇಳಿದ್ದರು.

ಶೃತಿ ಮುಖವನ್ನು ನನು ನೋಡಲ್ಲ. ಶೇಕ್ ಹ್ಯಾಂಡ್ ಸಾಧ್ಯವೇ ಇಲ್ಲ ಅರ್ಜುನ್ ಅಲ್ಲಿಂದ ಎದ್ದು ಬಂದರು. ಇದಕ್ಕೆ ಧ್ರುವ ಸರ್ಜಾ ಕೂಡ ನಾವು ಕೋರ್ಟ್‍ನಲ್ಲಿ ನೋಡ್ಕೋತಿವಿ ಅಂತಾ ಹೇಳಿದರು. ಇದು ಶೃತಿ ಸಿಡಿದೆಳಲು ಕಾರಣ. ಇದಕ್ಕಾಗಿಯೇ ದಿಢೀರ್ ಶನಿವಾರ ಶೃತಿ ಅವರು ಸರ್ಜಾ ವಿರುದ್ಧ ಸವಿಸ್ತಾರವಾಗಿ ದೂರು ನೀಡಿದ್ದಾರೆ ಅನ್ನೋದು ಬಯಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ